ಬಮಾಕೊ: ಮಧ್ಯ ಮಾಲಿಯ ಮೊಪ್ಟಿ ಪ್ರದೇಶದ ಹಳ್ಳಿಯೊಂದರ ಮೇಲೆ ಶುಕ್ರವಾರ ಬಂದೂಕುಧಾರಿಗಳು ಕನಿಷ್ಠ 21 ನಾಗರಿಕರನ್ನು ಹತ್ಯೆ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಅಜ್ಞಾತ ದುಷ್ಕರ್ಮಿಗಳು ಬಂಡಿಯಾಗರಾ ಪಟ್ಟಣದ ಸಮೀಪವಿರುವ ಯಾರೌ ಗ್ರಾಮವನ್ನು ಗುರಿಯಾಗಿಸಿಕೊಂಡು ಶುಕ್ರವಾ ಮಧ್ಯಾಹ್ನ ದಾಳಿ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಶಸ್ತ್ರಸಜ್ಜಿತ ದುಷ್ಕರ್ಮಿಗಳು ಹಳ್ಳಿಗೆ ನುಗ್ಗಿ ಗುಂಡು ಹಾರಿಸಿದರು. ಇದರಿಂದ 20 ರಿಂದ 30 ಜನರು ಸಾವನ್ನಪ್ಪಿದ್ದಾರೆ. ಈ ಪೈಕಿ ಮಹಿಳೆಯರೂ ಸೇರಿದ್ದಾರೆ. ಯಾವುದೇ ಗುಂಪು ದಾಳಿಯ ಹೊಣೆ ಹೊತ್ತುಕೊಂಡಿಲ್ಲ. ಪಶ್ಚಿಮ ಆಫ್ರಿಕಾದ ಮಾಲಿ ರಾಷ್ಟ್ರವು ಅಲ್ ಖೈದಾ ಮತ್ತು ಇಸ್ಲಾಮಿಕ್ ಸ್ಟೇಟ್ಗೆ ಉಗ್ರರೊಂದಿಗೆ ಸಂಪರ್ಕ ಹೊಂದಿದ್ದು, ಆಗಾಗ್ಗೆ ಇಲ್ಲಿ ದಂಗೆಗಳು ಸಾಮಾನ್ಯವಾಗಿದೆ.