News Karnataka Kannada
Sunday, April 28 2024
ವಿದೇಶ

ಗಾಜಾದ ಶಿಶು ವಿಹಾರದಲ್ಲಿ ಲಾಂಚರ್‌, ಮಾರ್ಟರ್ ಶೆಲ್‌ ಪತ್ತೆ ಮಾಡಿದ ಇಸ್ರೇಲ್​​

Israel detects launcher, mortar shell in Gaza's kindergarten
Photo Credit : News Kannada

 ಇಸ್ರೇಲ್: ಇಸ್ರೇಲ್​​​ ಮತ್ತು ಹಮಾಸ್  ನಡುವಿನ ಸಮರ ದಿನದಿಂದ ದಿನಕ್ಕೆ ಒಂದೊಂದು ದಿಕ್ಕು ಪಡೆಯುತ್ತಿದೆ.  ಇದೀಗ ಇಸ್ರೇಲ್​​ ಗಾಜಾದಲ್ಲಿ ಮಿಲಿಟರಿ ಕಾರ್ಯಚರಣೆ ಮಾಡುತ್ತಿದ್ದು, ಇಸ್ರೇಲ್​​​ ಸೇನೆ  ಗಾಜಾದಲ್ಲಿರುವ ಶಾಲೆಯ ಮೇಲೆ ಕಣ್ಣಿಟ್ಟಿದೆ.

ಈ ಶಾಲೆಗಳನ್ನು ಹಮಾಸ್​​​ ತಮ್ಮ ಶಸ್ತ್ರಾಸ್ತ್ರ ತಾಣವಾಗಿ ಮಾಡಿಕೊಂಡಿದ್ದು, ರಾಕೆಟ್ ಲಾಂಚರ್‌ಗಳು ಮತ್ತು ಮಾರ್ಟರ್ ಶೆಲ್‌ಗಳನ್ನು ಪತ್ತೆ ಮಾಡಿದ  ಒಂದು ವಿಡಿಯೋ ಸಮೇತ ಸಾಕ್ಷ್ಯವನ್ನು ಎಕ್ಸ್​​ನಲ್ಲಿ ಇಸ್ರೇಲ್​​ ಹಂಚಿಕೊಂಡಿದೆ.

ಆರ್‌ಪಿಜಿಗಳು, ಮಾರ್ಟರ್ ಶೆಲ್‌ಗಳು ಮತ್ತು ಇತರ ಶಸ್ತ್ರಾಸ್ತ್ರಗಳನ್ನು ಇಸ್ರೇಲ್​​​ ಐಡಿಎಫ್ ಪಡೆ ಉತ್ತರ ಗಾಜಾದ ಶಿಶು ವಿಹಾರ ಹಾಗೂ ಪ್ರಾಥಮಿಕ ಶಾಲೆಗಳಲ್ಲಿ ಪತ್ತೆ ಮಾಡಿದೆ. ಶಿಶುವಿಹಾರಗಳಲ್ಲಿ ಆಟಿಕೆಗಳನ್ನು ಸಂಗ್ರಹಿಸಬೇಕೇ ಹೊರತು ಶಸ್ತ್ರಾಸ್ತ್ರಗಳಲ್ಲ ಎಂದು ಇಸ್ರೇಲ್​​ ಹೇಳಿದೆ.

ಇನ್ನು ಆಸ್ಪತ್ರೆಗಳನ್ನು ಕೂಡ ಹಮಾಸ್​​​ ಶಸ್ತ್ರಾಸ್ತ್ರ ಸಂಗ್ರಹ ತಾಣವಾಗಿ ಮಾಡಿಕೊಂಡಿದೆ. ಈ ಹಿಂದೆ ಇಸ್ರೇಲ್​​​​ ಈ ಆಸ್ಪತ್ರೆಗಳ ನೆಲಮಾಳಿಗೆಯಲ್ಲಿ ಸ್ಫೋಟಕ ಬಾಡಿ ವೆಸ್ಟ್‌ಗಳು ಮತ್ತು ಹ್ಯಾಂಡ್ ಗ್ರೆನೇಡ್‌ಗಳನ್ನು ಪತ್ತೆ ಮಾಡಿತು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು