ಬೆಂಗಳೂರು: ನಟಿಯರಾದ ರಶ್ಮಿಕಾ ಮಂದಣ್ಣ, ಕತ್ರಿನಾ ಕೈಫ್, ಕಾಜೋಲ್ ಸೇರಿದಂತೆ ಅನೇಕ ಕಲಾವಿದರ ಡೀಪ್ಫೇಕ್ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ವೈರಲ್ ಆಗುತ್ತಿವೆ.
ಇದೀಗ ಬೆಂಗಳೂರು ಪೊಲೀಸರು ಡೀಪ್ಫೇಕ್ ವಿರುದ್ಧ ಕ್ರಮವೊಂದನ್ನು ಕೈಗೊಂಡಿದ್ದಾರೆ. ಇಂತಹ ವಿಡಿಯೋಗಳಿಂದ ನೀವು ಸಂಕಷ್ಟಕ್ಕೆ ಸಿಲುಕಿದ್ದರೆ, ಸಹಾಯವಾಣಿಗೆ ಕರೆ ಮಾಡುವಂತೆ ಮನವಿ ಮಾಡಿದ್ದಾರೆ. ಕರೆ ಮಾಡಬೇಕಾದ ಹೆಲ್ಪ್ ಲೈನ್ ನಂಬರ್ ಕೂಡ ನೀಡಿದ್ದಾರೆ. ಯಾರಾದರೂ ಅಂತಹ ವಿಡಿಯೋಗಳಿಂದ ನೊಂದಿದ್ದೀರಾ? 1930 ಸಂಖ್ಯೆಗೆ ಕರೆ ಮಾಡಬಹುದು.