News Karnataka Kannada
Thursday, May 02 2024
ವಿದೇಶ

ಹಮಾಸ್ ಉಗ್ರರಿಂದ ಮಗಳ ಬೆತ್ತಲೆ ಮೆರವಣಿಗೆ: ಸಾರ್ವಜನಿಕರಲ್ಲಿ ಅಂಗಲಾಚಿದ ತಾಯಿ

Mother pleads with public over daughter's naked parade by Hamas militants
Photo Credit : Twitter

ಇಸ್ರೇಲ್:ಇಸ್ರೇಲ್ ಮೇಲೆ ಹಮಾಸ್ ಉಗ್ರರು ನಡೆಸಿದ ದಾಳಿಯಲ್ಲಿ 300ಕ್ಕೂ ಹೆಚ್ಚು ಜನ ಸಾವಿಗೀಡಾಗಿದ್ದಾರೆ. ದಾಳಿ ವೇಳೆ ಹಮಾಸ್ ಉಗ್ರರು ಇಸ್ರೇಲ್ ಯುವತಿಯ ಬೆತ್ತಲೆಯನ್ನಾಗಿ ಮಾಡಿ ತೆರೆದ ಟ್ರಕ್‌ನಲ್ಲಿ ಮೆರವಣಿಗೆ ಮಾಡಿ ಕ್ರೌರ್ಯ ಮೆರೆದಿದ್ದಾರೆ.

ದಾಳಿ ವೇಳೆ ಹುತಾತ್ಮರಾದ ಅಮಾಯಕ ನಾಗರಿಕರ ಮೃತದೇಹಗಳನ್ನು ತೆರೆದ ಟ್ರಕ್‌ನಲ್ಲಿ ಇರಿಸಿ ಮೆರವಣಿಗೆ ಮಾಡಿದ್ದು, ಯುವತಿಯೊಬ್ಬರ ಬೆತ್ತಲೆ ದೇಹ ಮೆರವಣಿಗೆ ಮಾಡಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. ಅಲ್ಲದೆ ಪ್ಯಾಲೆಸ್ಟಿನಿಯನ್ ನಾಗರೀಕರು ಮಹಿಳೆಯ ಮೃತದೇಹವನ್ನು ನಿಂದಿಸಿ ಬಳಿಕ ಉಗುಳುವುದನ್ನು ಈ ವೀಡಿಯೋದಲ್ಲಿ ನೋಡಬಹುದು.

ಪ್ಯಾಲೇಸ್ಟಿನಿಯನ್ ಭಯೋತ್ಪಾದಕರು ಗಾಜಾಕ್ಕೆ ಓಡಿಸುತ್ತಿದ್ದ ಪಿಕ್-ಅಪ್ ಟ್ರಕ್‌ನ ಹಿಂಭಾಗದಲ್ಲಿ ಶನಿ ಲೌಕ್ ಅವರ ದೇಹವನ್ನು ಮೆರವಣಿಗೆ ಮಾಡುತ್ತಿದ್ದ ವೀಡಿಯೋವನ್ನು ನೋಡಿದ ಮಹಿಳೆಯ ತಾಯಿ ವೀಡಿಯೋದಲ್ಲಿ ಇರುವುದು ತಮ್ಮ ಮಗಳೆಂದು ದೃಢಪಡಿಸಿದ್ದಾರೆ. ಅಲ್ಲದೇ ಮಗಳ ಕುರಿತು ಹೆಚ್ಚಿನ ಮಾಹಿತಿ ನೀಡುವಂತೆ ಸಾರ್ವಜನಿಕರ ಬಳಿ ಅಂಗಲಾಚಿದ್ದಾರೆ.

ಕ್ಷಿಪಣಿ ದಾಳಿಯ ಬಳಿಕ ಪ್ಯಾಲೆಸ್ಟಿನಿಯಾದವರು ದಕ್ಷಿಣ ಇಸ್ರೇಲ್‌ಗೆ ನುಸುಳಿದ್ದು, ತೆರೆದ ಟ್ರಕ್‌ಗಳಲ್ಲಿ ಬೀದಿ ಬೀದಿ ಸುತ್ತುತ್ತಿದ್ದಾರೆ. ಈ ವೇಳೆ ರಸ್ತೆಯಲ್ಲಿ ಸಿಕ್ಕ ಸಿಕ್ಕ ನಾಗರಿಕರನ್ನು ಕೊಲ್ಲುತ್ತಿದ್ದಾರೆ ಎಂದು ವರದಿಗಳು ತಿಳಿಸಿವೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
30409

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು