ಬೀಜಿಂಗ್: ಚೀನಾದಲ್ಲಿ 3,400ಕ್ಕೂ ಅಧಿಕ ಕೋವಿಡ್ ಪಾಸಿಟಿವ್ ಪ್ರಕರಣ ದಾಖಲಾಗಿದ್ದು, 20,700 ಲಕ್ಷಣರಹಿತ ಕೋವಿಡ್ ಸೋಂಕು ಪ್ರಕರಣ ಪತ್ತೆಯಾಗಿದೆ.
ಸರ್ಕಾರ ಶಾಂಘೈನಲ್ಲಿ ಲಾಕ್ಡೌನ್ ಮತ್ತು ಕಠಿಣ ಕ್ರಮ ಹೇರಿದ್ದರೂ, ಸೋಂಕು ನಿಯಂತ್ರಣಕ್ಕೆ ಬಾರದೇ ಇರುವುದು ಮತ್ತು ಅಗತ್ಯ ಸೌಲಭ್ಯ ಕೊರತೆಯಿಂದಾಗಿ ಜನರು ಆಡಳಿತವನ್ನು ದೂರುತ್ತಿದ್ದಾರೆ.
ಶಾಂಘೈ ನಗರದಲ್ಲಿ ಗರಿಷ್ಠ ಸಂಖ್ಯೆಯ ಕೋವಿಡ್ ಸೋಂಕು ಪ್ರಕರಣ ಪತ್ತೆಯಾಗಿರುವುದು ಆತಂಕ ಮೂಡಿಸಿದೆ.ಅಲ್ಲದೆ, ಜನರಿಗೆ ಸೂಕ್ತ ವೈದ್ಯಕೀಯ ಸೌಲಭ್ಯ ಮತ್ತು ಆಹಾರ ದೊರೆಯುತ್ತಿಲ್ಲ ಎಂಬ ಆಕ್ರೋಶ ಕೇಳಿಬಂದಿದೆ.
ಚೀನಾದ ವಾಣಿಜ್ಯ ರಾಜಧಾನಿಯೆಂದು ಕರೆಯಲ್ಪಡುವ ಶಾಂಘೈನಲ್ಲಿ ಕೋವಿಡ್ ಹೆಚ್ಚಳದಿಂದ ಸ್ಥಳೀಯರಿಗೆ ಸಮಸ್ಯೆ ಎದುರಾಗಿದೆ.
ಈಗಾಗಲೇ ಸ್ಥಳೀಯಾಡಳಿತ ಹಲವು ಸುತ್ತಿನ ಪರೀಕ್ಷೆ ನಡೆಸಿದ್ದು, ತಾತ್ಕಾಲಿಕ ಆಸ್ಪತ್ರೆ ನಿರ್ಮಿಸಿ ಸೋಂಕು ಲಕ್ಷಣ ಇರುವವರು ಮತ್ತು ಲಕ್ಷಣ ರಹಿತ ಕೋವಿಡ್ ಪೀಡಿತರಿಗೆ ಚಿಕಿತ್ಸೆ ನೀಡಲಾಗುತ್ತಿದೆ.