News Karnataka Kannada
Saturday, May 18 2024
ಮಧ್ಯ ಪ್ರದೇಶ

ಗುಟ್ಕಾ ಹಾಕಿ ಬುಲೆಟ್ ಓಡಿಸೋ ಮಡದಿಗೆ ಡಿವೋರ್ಸ್ ಕೊಡಲು ಮುಂದಾದ ಪತಿರಾಯ

Pan
Photo Credit : NewsKarnataka

ಮಧ್ಯಪ್ರದೇಶ: ಕುಡಿದು ಬರುವ ಗಂಡ ಹಣವನ್ನೆಲ್ಲ ಖಾಲಿ ಮಾಡಿ ಪತ್ನಿಯನ್ನು ಬೀದಿಗೆ ಹಾಕಿದ ಉದಾಹರಣೆ ಇದೆ. ಅದೇ ರೀತಿ ಕುಡಿತ ಸೇರಿದಂತೆ ಬೇರೆ ಚಟಕ್ಕೆ ಬಿದ್ದ ಪತ್ನಿಯಿಂದಲೂ ಪತಿ ಸಮಸ್ಯೆಗೆ ಒಳಗಾಗ್ತಾನೆ. ಈಗ ಉತ್ತರ ಪ್ರದೇಶದ ಆಗ್ರಾ ಇಂಥದ್ದೇ ವಿಷ್ಯಕ್ಕೆ ಚರ್ಚೆಯಲ್ಲಿದೆ. ಪತ್ನಿಯ ಗುಟ್ಕಾ ಹಾಗೂ ಬುಲೆಟ್ ಚಟ ಈಗ ದಂಪತಿ ಮಧ್ಯೆ ವಿವಾದ ಸೃಷ್ಟಿಸಿದ್ದಲ್ಲದೆ ವಿಚ್ಛೇದನಕ್ಕೆ ಬಂದು ನಿಂತಿದೆ. ಕುಟುಂಬ ಸಲಹಾ ಕೇಂದ್ರದಲ್ಲಿ ಪ್ರಕರಣವಿದ್ದು, ಇಬ್ಬರ ಮಧ್ಯೆ ಹೊಂದಾಣಿಕೆ ತರುವ ಪ್ರಯತ್ನ ನಡೆದಿದೆ ಎಂದು ತಿಳಿದು ಬಂದಿದೆ.

ಹೌದು. . 2020ರಲ್ಲಿ ಜಗದೀಶ್‌ಪುರ ಪ್ರದೇಶದ ಹುಡುಗಿಯನ್ನು ಠಾಣಾ ಸದರ್ ಪ್ರದೇಶದ ಹುಡುಗ ಮದುವೆ ಆಗಿದ್ದ. ತೀರಾ ಬಡತನವಿರುವ ಕುಟುಂಬ ಇವರದ್ದು. ಆದರೆ ಹುಡುಗಿ ದೊಡ್ಡ ಮನೆ ಬೇಕು ಎಂದ ಕಾರಣಕ್ಕೆ ಆಕೆ ತಂದೆ ಹುಡುಗನಿಗೆ ಹೊಸ ಮನೆಯನ್ನು ಉಡುಗೊರೆಯಾಗಿ ನೀಡಿದ್ದಾರೆ. ಜೊತೆಗೆ ಮಗಳಿಗೆ ಬುಲೆಟ್ ಕೊಡಿಸಿದ್ದಾರೆ. ಆರಂಭದಲ್ಲಿ ಇಬ್ಬರ ದಾಂಪತ್ಯ ಚೆನ್ನಾಗಿಯೇ ಇತ್ತು. ಆ ನಂತರ ಹುಡುಗನಿಗೆ ತನ್ನ ಹೆಂಡತಿ ಗುಟ್ಕಾ ತಿನ್ನುತ್ತಾಳೆ ಎಂಬ ಸಂಗತಿ ಗೊತ್ತಾಗಿದೆ. ಹುಡುಗಿ ಬರೀ ಗುಟ್ಕಾ ತಿನ್ನೋದಿಲ್ಲ, ಗುಟ್ಕಾ ಹಾಕಿದಾಗೆಲ್ಲ ಬುಲೆಟ್ ಏರಿ ರೈಡ್ ಗೆ ಹೋಗ್ತಾಳೆ. ಇದು ಆತನಿಗೆ ದೊಡ್ಡ ತಲೆಬಿಸಿಯಾಗಿದೆ.

ಪತ್ನಿಯ ಗುಟ್ಕಾ ಹಾಗೂ ಪೆಟ್ರೋಲ್ ಗೆ ದುಡಿದ ಹಣವೆಲ್ಲ ಹೋಗ್ತಿದೆ ಎಂದು ಪತಿ ಆರೋಪ ಮಾಡಿದ್ದಾನೆ. 2023ರಲ್ಲಿ ಇಬ್ಬರ ಮಧ್ಯೆ ಗಲಾಟೆ ಜೋರಾಗಿದೆ. ಹಾಗಾಗಿ ಪತ್ನಿಗೆ ವಿಚ್ಛೇದನ ನೀಡಲು ಮುಂದಾಗಿದ್ದಾನೆ. ಈ ವಿಚಾರ ಊರಲ್ಲಿ ಸದ್ದು ಮಾಡ್ತಿದ್ದಂತೆ ಪತಿ ಬಿಟ್ಟು ಹೋಗ್ತಿದ್ದಂತೆ   ಅಂತ ಪತ್ನಿ ಪೊಲೀಸರಿಗೆ ದೂರು ನೀಡಿದ್ದಾಳೆ.

ವಿಚಾರಣೆ ವೇಳೆ ಪೊಲೀಸರು ಪ್ರಕರಣವನ್ನು ಕುಟುಂಬ ಸಲಹಾ ಕೇಂದ್ರಕ್ಕೆ ವರ್ಗಾಯಿಸಿದ್ದಾರೆ. ಅಧಿಕಾರಿಗಳ ಮುಂದೆ ಹಾಜರಾದ ಪತಿ, ಪತ್ನಿ ಗುಟ್ಕಾ ಸೇವನೆ ಬಿಡಬೇಕು ಎಂದಿದ್ದಾನೆ. ಮದುವೆ ಆಗುವ ಮೊದಲೇ ನಾನು ಗುಟ್ಕಾ ಸೇವನೆ ಮಾಡುತ್ತಿದ್ದೆ. ನನ್ನ ತಂದೆ ನನಗೆ ಬುಲೆಟ್ ಕೊಡಿಸಿದ್ದಾರೆ. ಬಾಲ್ಯದಿಂದಲೂ ನಾನು ಬುಲೆಟ್ ಓಡಿಸುತ್ತೇನೆ. ಮದುವೆ ಆದ್ಮೇಲೆ ಗುಟ್ಕಾ ಸೇವನೆಯನ್ನು ನಾನು ಕಡಿಮೆ ಮಾಡಿದ್ದೇನೆ ಎಂದು ಪತ್ನಿ ಪೊಲೀಸ್ ಮುಂದೆ ಹೇಳಿದ್ದಾಳೆ. ಸದ್ಯ ವಿಚ್ಛೇದನ ವಿಚಾರ ಕೋರ್ಟ್‌ ನಲ್ಲಿ ನಡೆಯುತ್ತಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12795
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು