ಬೀಚಿಂಗ್ : ಚೀನಾದ ಶೆನ್ ಝೆನ್ ನಗರದಲ್ಲಿ ಕಳೆದೊಂದು ವಾರದಲ್ಲಿ ಲಾಕ್ ಡೌನ್ ಘೋಷಿಸಲಾಗಿದೆ.ಚೀನಾದ ಹಲವು ನಗರಗಳಲ್ಲಿ ಮತ್ತೆ ಕೊರೊನಾ ವೈರಸ್ ಸೋಂಕಿನ ಪ್ರಕರಣಗಳು ಹೆಚ್ಚಳವಾಗುತ್ತಿದ್ದು, ಸುಮಾರು 1.75 ಕೋಟಿ ಜನಸಂಖ್ಯೆಯಿರುವ ಶೆನ್ ಝೆನ್ ನಗರದಲ್ಲಿ ಲಾಕ್ ಡೌನ್ ಘೋಷಿಸಲಾಗಿದೆ. ಚೀನಾದಲ್ಲಿ ಇತ್ತೀಚೆಗೆ ಒಟ್ಟು 3,400 ಮಂದಿಯಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ.
ಸರ್ಕಾರವು ನಗರದ ಎಲ್ಲ ನಿವಾಸಿಗಳನ್ನು ಮೂರು ಬಾರಿ ತಪಾಸಣೆಗೆ ಒಳಪಡಿಸಿತ್ತು. ಮಾರ್ಚ್ 20ರವರೆಗೂ ನಿರ್ಬಂಧದ ಆದೇಶಗಳು ಮುಂದುವರಿಯಲಿವೆ ಎಂದು ಸರ್ಕಾರದ ಪ್ರಕಟಣೆ ತಿಳಿಸಿದೆ.
ಪಕ್ಕದ ಹಾಂಗ್ಕಾಂಗ್ನಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾದ ಬೆನ್ನಿಗೇ ಶೆನ್ಝೆನ್ ನಗರದಲ್ಲಿಯೂ ಸೋಂಕು ಹೆಚ್ಚಾಗಿದೆ. ಹಾಂಗ್ಕಾಂಗ್ನಲ್ಲಿ ಸುಮಾರು 3 ಲಕ್ಷ ಜನರು ಪ್ರಸ್ತುತ ಹೋಂ ಕ್ವಾರಂಟೈನ್ ಅಥವಾ ಐಸೊಲೇಶನ್ನಲ್ಲಿದ್ದಾರೆ.