News Karnataka Kannada
Saturday, May 04 2024
ವಿದೇಶ

ಅಫ್ಘಾನಿಸ್ಥಾನ : ಸಿಖ್ ಜನರನ್ನು ಇಸ್ಲಾಂ ನ ಸುನ್ನಿ ಧರ್ಮಕ್ಕೆ ಮತಾಂತರಗೊಳ್ಳುವಂತೆ ತಾಲಿಬಾನ್ ಒತ್ತಾಯ

Talibans Rule
Photo Credit :

ಅಫ್ಘಾನಿಸ್ಥಾನದಲ್ಲಿ ತಾಲಿಬಾನಿಗಳ ಅಟ್ಟಹಾಸ ಹೆಚ್ಚಾಗಿದ್ದು, ಇದೀಗ ಅಲ್ಲಿನ ಸಿಖ್ ಜನರನ್ನು ಇಸ್ಲಾಂ ನ ಸುನ್ನಿ ಧರ್ಮಕ್ಕೆ ಮತಾಂತರಗೊಳ್ಳುವಂತೆ ತಾಲಿಬಾನ್ ಒತ್ತಾಯಿಸುತ್ತಿರುವುದು ವರದಿಯಾಗಿದೆ.

ಅಫ್ಘಾನಿಸ್ಥಾನವನ್ನು ತಾಲಿಬಾನ್ ವಶಪಡಿಸಿಕೊಂಡ ಬಳಿಕ ಅಲ್ಲಿನ ಸಿಖ್ ಸಮುದಾಯ ಇಸ್ಲಾಂಗೆ ಮತಾಂತರವಾಗಬೇಕು, ಇಲ್ಲವಾದರೆ ದೇಶ ಬಿಟ್ಟು ಹೋಗಬೇಕು ಎಂದು ತಾಲಿಬಾನ್ ತಾಕೀತು ಮಾಡಿದೆ.

ಅಫ್ಘಾನಿಸ್ತಾನದಲ್ಲಿ ತಾಲಿಬಾನಿಗಳ ವ್ಯವಸ್ಥಿತ ತಾರತ್ಯಮ ಮತ್ತು ಧಾರ್ಮಿಕ ಹಿಂಸಾಚಾರಗಳು ಅತಿರೇಕಕ್ಕೆ ತಿರುಗಿದ್ದು, ಅಫ್ಘಾನ್ ನಲ್ಲಿನ ಸಿಖ್ಖರ ಪರಿಸ್ಥಿತಿ ಹದಗೆಟ್ಟಿದೆ ಎಂದು ಅಂತಾರಾಷ್ಟ್ರೀಯ ಹಕ್ಕು ಹಾಗೂ ಭದ್ರತೆಯ ಒಕ್ಕೂಟ ತಿಳಿಸಿದೆ.

ಕಾಬೂಲ್ ನ ಘಜ್ನಿ ಹಾಗೂ ನಾಂಗರ್ ಹರದ್ ನಲ್ಲಿ ಸಿಖ್ ಸಮುದಾಯದವರು ವಾಸವಾಗಿದ್ದಾರೆ. ಕಳೆದ ವಾರ ಕಾರ್ತ್-ಇ-ಪಾರ್ವಾನ್ ಜಿಲ್ಲೆಯಲ್ಲಿನ ಗುರುದ್ವಾರದ ಮೇಲೆ 15-20 ಉಗ್ರರು ದಾಳಿ ಮಾಡಿ, ಭದ್ರತಾ ಕಾವಲುಗಾರರನ್ನು ಕಟ್ಟಿ ಹಾಕಿ ಚಿತ್ರಹಿಂಸೆ ಕೊಟ್ಟಿರುವುದು ವರದಿಯಾಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು