News Karnataka Kannada
Wednesday, May 01 2024
ವಿದೇಶ

ತಾಲಿಬಾನ್ ಗೆ ನಿಷೇಧ ಹೇರಿದ ಫೇಸ್ಬುಕ್ ಸಂಸ್ಥೆ

Taliban
Photo Credit :
ಲಂಡನ್ : ತಾಬಾನ್ ಗೆ ಫೇಸ್ಬುಕ್ ನಿಷೇಧ ಹೇರಿರುವುದಾಗಿ ಘೋಷಿಸಿದೆ. ಈಗಾಗಲೇ ತಾಲಿಬಾನ್ ಬೆಂಬಲಿಗರ ಖಾತೆಗಳು, ಬರಹಗಳು, ಪೋಸ್ಟ್ ಗಳನ್ನು ಅಳಿಸಿಹಾಕಿರುವುದಾಗಿ ಫೇಸ್ ಬುಕ್ ತಿಳಿಸಿದೆ.

ಅಫ್ಘಾನಿಸ್ತಾನ ವಿದ್ಯಮಾನಗಳನ್ನು ಪರಿಶೀಲಿಸಲು ಪ್ರತ್ಯೇಕ ತಂಡವನ್ನು ಫೇಸ್ ಬುಕ್ ನಿಯೋಜಿಸಿದ್ದು ತಾಲಿಬಾನ್ ಬೆಂಬಲಿಗರು ನಾಯಕರಿಂದ ಹಾಗೂ ತಾಲಿಬಾನ್ ಕುರಿತು ಫೇಸ್ ಬುಕ್ ನಲ್ಲಿ ಶೇರ್ ಮಾಡಲ್ಪಡುವ ಪೋಸ್ಟ್ ಗಳ ಮೇಲೆ ನಿಗಾ ಇರಿಸಲಿದೆ.

ಹಲವು ವರ್ಷಗಳಿಂದ ತಾಲಿಬಾನ್ ಸಂಘಟನೆ ಜನರಲ್ಲಿ ಭಯ ಬಿತ್ತಲು ಸಾಮಾಜಿಕ ಜಾಲತಾಣಗಳ ಬಳಕೆ ಮಾಡಿಕೊಂಡಿತ್ತು. ಫೇಸ್ ಬುಕ್ ಸಂಸ್ಥೆಯ ಅಧೀನದಲ್ಲಿರುವ ವಾಟ್ಸ್ ಆಪ್ ಮತ್ತು ಇನ್ಸ್ಟಾಗ್ರಾಂಗೂ ಈ ನಿಯಮಾವಳಿ ಅನ್ವಯವಾಗಲಿದೆ.

ಅಂತಾರಾಷ್ಟ್ರೀಯ ಸಮುದಾಯದ ಅಭಿಪ್ರಾಯಗಳ ಅನ್ವಯ ತಾನು ಕಾರ್ಯಾಚರಿಸುವುದಾಗಿ ಫೇಸ್ ಬುಕ್ ಹೇಳಿಕೊಂಡಿದೆ. ಅಂದರೆ ತಾಲಿಬಾನ್ ಸರ್ಕಾರದ ಮಾತಿಗೆ ತಾನು ಕಿವಿಗೊಡುವುದಿಲ್ಲ ಎಂದು ಪರೋಕ್ಷವಾಗಿ ಹೇಳಿದಂತಾಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು