Ad

ದರ್ಶನ್ ಮಾಡಿರುವುದು ಸಾಮಾನ್ಯ ಕೃತ್ಯವಲ್ಲ, ವಿಕೃತಿ ಎಂದ ಎನ್‌.ಮಹೇಶ್

ಚಿತ್ರನಟ ದರ್ಶನ್ ಮಾಡಿರುವುದು ಸಾಮಾನ್ಯ ಕೃತ್ಯವಲ್ಲ, ವಿಕೃತಿ ಎಂದು ರೇಣುಕಾಸ್ವಾಮಿ ಕೊಲೆ ಸಂಬಂಧ ಬಿಜೆಪಿ ರಾಜ್ಯ ಉಪಾಧ್ಯಕ್ಷ ಎನ್‌.ಮಹೇಶ್ ಕಿಡಿಕಾರಿದರು.

ಚಾಮರಾಜನಗರ: ಚಿತ್ರನಟ ದರ್ಶನ್ ಮಾಡಿರುವುದು ಸಾಮಾನ್ಯ ಕೃತ್ಯವಲ್ಲ, ವಿಕೃತಿ ಎಂದು ರೇಣುಕಾಸ್ವಾಮಿ ಕೊಲೆ ಸಂಬಂಧ ಬಿಜೆಪಿ ರಾಜ್ಯ ಉಪಾಧ್ಯಕ್ಷ ಎನ್‌.ಮಹೇಶ್ ಕಿಡಿಕಾರಿದರು.

Ad
300x250 2

ಚಾಮರಾಜನಗರದಲ್ಲಿ ಮಾಧ್ಯಮದೊಂದಿಗೆ ಅವರು ಮಾತನಾಡಿ, ತಾನು ಅಜಾನಬಾಹು ಎಂಬುದನ್ನು ರೇಣುಕಾಸ್ವಾಮಿ ಎದುರು ತೋರಿಸಿಕೊಂಡಿದ್ದಾನೆ,
ದರ್ಶನ್ ಗೆ ಕಠಿಣಾತಿ ಕಠಿಣ ಶಿಕ್ಷೆ ಕೊಡಬೇಕು, ಆತನ ಬೆಂಬಲಕ್ಕೆ ಸಿಎಂ ಹೋಗದಿರುವುದು ಸ್ವಾಗತಾರ್ಹ.‌ಯಾವ ಮಂತ್ರಿಗಳು, ಶಾಸಕರು ದರ್ಶನ್ ಬೆಂಬಲಕ್ಕೆ ನಿಲ್ಲಬಾರದು ಎಂದರು.

ಪೊಲೀಸರು ಯಾವ ಪ್ರಭಾವಿ ಮಾತನ್ನೂ ಕೇಳಬಾರದು, ನಿಜವಾದ ಪ್ರಭಾವಿ ರೇಣುಕಾಸ್ವಾಮಿ ಕುಟುಂಬವಾಗಿದೆ, ರೇಣುಕಾಸ್ವಾಮಿ ಕುಟುಂಬದ ಮಾತನ್ನು ಕೇಳಬೇಕು, ರೇಣುಕಾಸ್ವಾಮಿ ಕುಟುಂಬಕ್ಕೆ ನ್ಯಾಯ ಕೊಡಿಸಬೇಕಿದೆ, ನಟ ದರ್ಶನ್ ಮಾಡಿರುವುದು ಸಾಮಾನ್ಯ ಕೃತ್ಯವಲ್ಲ, ವಿಕೃತಿ ಎಂದು ಕಿಡಿಕಾರಿದರು.

Ad
Ad
Nk Channel Final 21 09 2023
Ad