News Karnataka Kannada
Saturday, May 04 2024
ವಿದೇಶ

ಶ್ರೀ ರಾಮ ಪ್ರಾಣ ಪ್ರತಿಷ್ಠಾಪನೆ: ಅಮೆರಿಕದಲ್ಲಿ ಬೃಹತ್ ಕಾರು ರ್‍ಯಾಲಿಯಲ್ಲಿ ʼಜೈ ಶ್ರೀರಾಮ್’ ಘೋಷಣೆ

New Project 2024 01 09t123423.222
Photo Credit : News Kannada

ಹೂಸ್ಟನ್: ಅಯೋಧ್ಯೆಯಲ್ಲಿ ನಡೆಯಲಿರುವ 00 ಕಾರ್ಯಕ್ರಮ ಜ.22ರಂದು ನಡೆಯಲಿದೆ. ಈ ಹಿನ್ನಲೆಯಲ್ಲಿ ಅಮೆರಿಕದ ಹಿಂದೂ ಸಮುದಾಯದ ಸದಸ್ಯರು ಭಾನುವಾರ(ಜ.7) ಹೂಸ್ಟನ್‌ನಾದ್ಯಂತ ಬೃಹತ್ ಕಾರು ರ್‍ಯಾಲಿ ನಡೆಸಿದ್ದಾರೆ. ರ್‍ಯಾಲಿಯಲ್ಲಿ ದಾರಿಯುದ್ದಕ್ಕೂ ರಾಮನ ಕುರಿತ ಭಜನೆ ಹಾಗೂ ‘ಜೈ ಶ್ರೀರಾಮ್’ ಘೋಷಣೆಗಳು ಮೊಳಗಿದವು.

ಈ ಬೃಹತ್‌ ರ್‍ಯಾಲಿಯನ್ನು ಸ್ವಯಂಸೇವಕರಾದ ಅಚಲೇಶ್ ಅಮರ್, ಉಮಂಗ್ ಮೆಹ್ತಾ ಮತ್ತು ಅರುಣ್ ಮುಂದ್ರಾ ಎಂಬುವವರು ಆಯೋಜಿಸಿದ್ದರು. ಸುಮಾರು ಐದು ಕಿ.ಮೀ ರ್‍ಯಾಲಿ ನಡೆದಿದೆ. ಹೂಸ್ಟನ್‌ನ ಮೀನಾಕ್ಷಿ ದೇವಾಲಯದಿಂದ ಪ್ರಾರಂಭವಾದ ರ್‍ಯಾಲಿ ರಿಚ್ಮಂಡ್‌ನ ಶಾರದ್ ಅಂಬಾ ದೇವಸ್ಥಾನದಲ್ಲಿ ಮಧ್ಯಾಹ್ನ ಮುಕ್ತಾವಾಗಿದೆ.

ರ್‍ಯಾಲಿಯಲ್ಲಿ 500ಕ್ಕೂ ಹೆಚ್ಚು ಉತ್ಸಾಹಿ ಸವಾರರು ರಾಮ ಮಂದಿರ, ಭಾರತ ಹಾಗೂ ಅಮೆರಿಕ ಧ್ವಜದ ಚಿತ್ರವಿರುವ ಕೇಸರಿ ಬ್ಯಾನರ್‌ಗಳನ್ನು ಹಿಡಿದು 216 ಕಾರುಗಳ ಮೂಲಕ ರ್‍ಯಾಲಿ ನಡೆಯಿತು. ಸುಮಾರು 2 ಸಾವಿರ ಭಕ್ತರು ವಿವಿಧ ದೇವಾಲಯಗಳಲ್ಲಿ ಭಜನೆಯೊಂದಿಗೆ ರ್‍ಯಾಲಿಯನ್ನು ಸ್ವಾಗತಿಸಿದರು.

 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು