News Karnataka Kannada
Wednesday, April 17 2024
Cricket
ವಿದೇಶ

ಅಮೆರಿಕದಲ್ಲಿ ಪ್ರಧಾನಿ ಮೋದಿ ಆಹಾರ ಆತಿಥ್ಯ ಒದಗಿಸಿದ ಕುಂದಾಪುರ ಮೂಲದ ಉದ್ಯಮಿ ಯಾರು ಗೊತ್ತಾ

Mysuru: Promoting the achievements of the Central Government in the last nine years
Photo Credit : News Kannada

ಕುಂದಾಪುರ: ಅಮೆರಿಕ ಪ್ರವಾಸ ವೇಳೆ ಪ್ರಧಾನಿ ಮೋದಿ ಅವರಿಗೆ ಊಟೋಪಚಾರದ ಆತಿಥ್ಯ ನೀಡುವ ಜವಾಬ್ದಾರಿ ಅಮೆರಿಕದ ಹೋಟೆಲ್‌ ಉದ್ಯಮಿ ಆಲೂರು ಮೂಲದ ಅನಿವಾಸಿ ಭಾರತೀಯ ಆನಂದ ಪೂಜಾರಿ ಅವರದಾಗಿತ್ತು.

ಮೋದಿ ಅವರು ವಾಷಿಂಗ್ಟನ್ ಡಿ.ಸಿ ಯಲ್ಲಿ ವಾಸ್ತವ್ಯವಿದ್ದ ಮೂರು ದಿನ ಊಟೋಪಚಾರದ ನೇತೃತ್ವ ವಹಿಸಿದವರು. ಆಲೂರು ಆನಂದ ಪೂಜಾರಿ, ಆ ಮೂಲಕ ಆನಂದ್ ಅವರು ಮೋದಿ ಅವರಿಗೆ ಐದನೇ ಬಾರಿಗೆ ಊಟದ ಆತಿಥ್ಯದ ಜವಾಬ್ದಾರಿ ನೋಡಿಕೊಂಡಂತಾಗಿದೆ. ವಾಷಿಂಗ್ಟನ್ ಡಿಸಿಯಲ್ಲಿ 35 ವರ್ಷಗಳಿಂದ ನೆಲೆಸಿರುವ ಆನಂದ ಪೂಜಾರಿ ಮತ್ತು ಪತ್ನಿ ಸುಮಿತ್ರಾ ದಂಪತಿ 25 ವರ್ಷಗಳಿಗೂ ಹೆಚ್ಚು ಕಾಲದಿಂದ ವುಡ್‌ ಲ್ಯಾಂಡ್ಸ್‌ ಹೊಟೇಲನ್ನು ನಡೆಸುತ್ತಿದ್ದಾರೆ. ಇವರು ಬೈಂದೂರು ತಾಲೂಕಿನ ಆಲೂರು ಗ್ರಾಮದ ಕಲಂಗಡಿ ಮನೆಯ ನಿವಾಸಿ.

ಬಡಿಯ ಪೂಜಾರಿ ಹಾಗೂ ಗಿರಿಜಾ ದಂಪತಿಯ ಪುತ್ರ. ಭಾರತದಿಂದ ಕೇಂದ್ರ ಸಚಿವರ ಸಹಿತ ಗಣ್ಯರು ಭೇಟಿ ನೀಡಿದರೆ, ಅವರಿಗೆಲ್ಲ ಆತಿಥ್ಯ ಇವರದೇ ಆಗಿದೆ.

2023 ಅಂತಾರಾಷ್ಟ್ರೀಯ ಸಿರಿಧಾನ್ಯ ವರ್ಷ ಆದ ಕಾರಣ ಮೊದಲ ದಿನ ರಾತ್ರಿಯೂಟಕ್ಕೆ ಸಿರಿಧಾನ್ಯಗಳದೇ ಬಿಸಿಬೇಳೆ ಬಾತ್ ಮಾಡಿದ್ದರು. ಉಳಿದಂತೆ ಮೋದಿಯವರು ಗುಜರಾತಿ ಶೈಲಿಯ ಆಹಾರ, ತಾಜಾ ತರಕಾರಿಗಳು, ಹಣ್ಣುಗಳು ಇತ್ಯಾದಿಯನ್ನಷ್ಟೇ ಬಯಸುವುದರಿಂದ ಮತ್ತು ದಕ್ಷಿಣ ಭಾರತೀಯ ವಿಶೇಷಗಳಾದ ಇಡ್ಲಿ-ಚಟ್ಟಿ ವಡೆ-ಸಾಂಬಾರ್ ಸಹ ಅವರಿಗೆ ಇಷ್ಟವೇ ಆದ್ದರಿಂದ, ಪುನರಾವರ್ತನೆ ಆಗದಂತೆ ನೋಡಿಕೊಂಡು ಶುದ್ಧ ಸಸ್ಯಹಾರ ಆಹಾರವನ್ನೇ ಒದಗಿಸಿದ್ದಾರೆ.

‘ತರಕಾರಿಗಳೆಲ್ಲ ಭಾರತದವೇ ಆಗಬೇಕೆಂದು ಎಲ್ಲೆಲ್ಲಿಂದ ಹುಡುಕಿ ತರುವ ಕಷ್ಟ ತಗೋಬೇಡಿ. ಸ್ಥಳೀಯವಾಗಿ ಬೆಳೆದ, ಇದುವರೆಗೆ ನನಗೆ ಅಪರಿಚಿತ ತರಕಾರಿಗಳಿದ್ದರೆ ದಯವಿಟ್ಟು ಅವುಗಳನ್ನೇ ಬಳಸಿ’ ಎಂದು ಮೋದಿಯವರು ಸೂಚನೆ ಕೊಟ್ಟಿದ್ದರು ಎನ್ನಲಾಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು