ಅಮೆರಿಕ: ಅಮೆರಿಕದ ಅರಿಜೋನಾದಲ್ಲಿನ ಉಡುಪಿ ಪುತ್ತಿಗೆ ಮಠದ ವೆಂಕಟೇಶ ದೇವರಿಗೆ ವಜ್ರ ಖಚಿತ ಬಂಗಾರದ ಕಿರೀಟ ಸಮರ್ಪಿಸಲಾಯಿತು.
ಸ್ವರ್ಣ ಕಿರೀಟವನ್ನು ಶಂಖ, ಜಾಗಟೆ ಚಂಡೆ ವಾದ್ಯದೊಂದಿಗೆ ಉತ್ಸವದಲ್ಲಿ ದೇಗುಲಕ್ಕೆ ಕೊಂಡೊಯ್ಯಲಾಯಿತು. ಮೆರವಣಿಗೆಯಲ್ಲಿ ಅಪಾರ ಸಂಖ್ಯೆಯ ಭಕ್ತರು ದೇವರ ಪ್ರಾರ್ಥನೆ ಮಾಡುತ್ತಾ ಸಂಭ್ರಮದಲ್ಲಿ ಭಾಗವಹಿಸಿದರು. ಶ್ರೀ ವೆಂಕಟೇಶ ದೇವರಿಗೆ ವಜ್ರ ಖಚಿತ ಬಂಗಾರದ ಕಿರೀಟವನ್ನು ಇರಿಸಿ ಪ್ರಾರ್ಥನೆ ಗಳೊಂದಿಗೆ ಮಂಗಳಾರತಿಯನ್ನು ಸಮರ್ಪಿಸಲಾಯಿತು.
ಅಶ್ವಮೇಧ ಪಾರಾಯಣದೊಂದಿಗೆ ಶ್ರೀ ಸೂಕ್ತ ಹೋಮ ಜರಗಿತು.