Bengaluru 21°C
Ad

ಫ್ಲ್ಯಾಟ್​’ನಲ್ಲಿ ಒಂದೇ ಕುಟುಂಬದ ನಾಲ್ವರು ಶವವಾಗಿ ಪತ್ತೆ

ಜಹಾಂಗೀರ್‌ ಪುರ ಪ್ರದೇಶದ ಫ್ಲ್ಯಾಟ್​ ನಲ್ಲಿ ವೃದ್ಧ ಮತ್ತು ಮೂವರು ಮಹಿಳೆಯರು ಶವವಾಗಿ ಪತ್ತೆಯಾಗಿದ್ದಾರೆ.

ಸೂರತ್‌: ಜಹಾಂಗೀರ್‌ ಪುರ ಪ್ರದೇಶದ ಫ್ಲ್ಯಾಟ್​ ನಲ್ಲಿ ವೃದ್ಧ ಮತ್ತು ಮೂವರು ಮಹಿಳೆಯರು ಶವವಾಗಿ ಪತ್ತೆಯಾಗಿದ್ದಾರೆ.

ಫ್ಲ್ಯಾಟ್​ ಮಾಲೀಕ ಜಸುಬೆನ್ ವಧೇಲ್, ಆಕೆಯ ಸಹೋದರಿಯರಾದ ಶಾಂತಬೆನ್ ವಧೇಲ್ (53) ಮತ್ತು ಗೌರಿಬೆನ್ ಮೇವಾಡ್ (55) ಮತ್ತು ಗೌರಿಬೆನ್ ಅವರ ಪತಿ ಹೀರಾಭಾಯಿ (60) ಅವರ ಶವಗಳು ಅಪಾರ್ಟ್‌ಮೆಂಟ್‌ನಲ್ಲಿ ಪತ್ತೆಯಾಗಿವೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇವರು ಶುಕ್ರವಾರ ರಾತ್ರಿ 10 ಗಂಟೆ ಸುಮಾರಿಗೆ ಮಲಗಿದ್ದರು ಎಂದು ಅವರು ಹೇಳಿದರು.

ಜಶು ಬೆನ್ ಅವರ ಪುತ್ರ ಮುಖೇಶ್ ಅವರು ಬೆಳಗ್ಗೆ ಚಹಾ ನೀಡಲು ಹೋದಾಗ ಯಾವುದೇ ಪ್ರತಿಕ್ರಿಯೆ ಬರದಿದ್ದಾಗ ಘಟನೆ ಬೆಳಕಿಗೆ ಬಂದಿದೆ. ಅವರು ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿರುವುದನ್ನು ಕಂಡುಹಿಡಿದರು. ವಾಂತಿ ಮಾಡಿಕೊಂಡಿದ್ದರು. ಅವರ ದೇಹದಲ್ಲಿ ಯಾವುದೇ ಗಾಯಗಳು ಅಥವಾ ಗುರುತುಗಳಿಲ್ಲ ಎಂದು ತಿಳಿದು ಬಂದಿದೆ.

ಪೊಲೀಸರು ಮತ್ತು ತುರ್ತು ಸೇವೆಗಳನ್ನು ಘಟನಾ ಸ್ಥಳಕ್ಕೆ ಕರೆಸಲಾಯಿತು ಮತ್ತು ಶವಗಳನ್ನು ಮರಣೋತ್ತರ ಪರೀಕ್ಷೆಗೆ ಕೊಂಡೊಯ್ಯಲಾಯಿತು. ಪೊಲೀಸರು ಎಲ್ಲಾ ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದಾರೆ.

ಅವರು ಮಲಗುವ ಮುನ್ನ ಒಟ್ಟಿಗೆ ಊಟ ಮಾಡಿದ್ದರಿಂದ ಆಹಾರ ವಿಷಪೂರಿತವಾಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.

Ad
Ad
Nk Channel Final 21 09 2023
Ad