Bengaluru 22°C
Ad

250 ಕೋಟಿ ರೂ. ಸಾಲದ ಸುಳಿಗೆ ಸಿಲುಕಿದ ನಟಿ ರಕುಲ್ ಪ್ರೀತ್ ಸಿಂಗ್ ಪತಿ

Rakul Preet Singh

ಮುಂಬೈ: ಬಾಲಿವುಡ್ ನಟಿ ರಕುಲ್ ಪ್ರೀತ್ ಸಿಂಗ್ ಕಳೆದ ವರ್ಷ ಫೆಬ್ರವರಿಯಲ್ಲಿ ನಿರ್ಮಾಪಕ, ನಟ ಜಾಕಿ ಭಗ್ನಾನಿ ಅವರನ್ನು ಮದುವೆ ಆಗಿದ್ದಾರೆ. ಹಿಂದಿ ಚಿತ್ರರಂಗದಲ್ಲಿ ದೊಡ್ಡ ನಿರ್ಮಾಪಕ ಎನಿಸಿಕೊಂಡಿರುವ ಜಾಕಿ ಭಗ್ನಾನಿ ಅವರನ್ನು ಕೈ ಹಿಡಿದ ಬಳಿಕ ರಕುಲ್​ ಪ್ರೀತ್​ ಸಿಂಗ್​ ಜೀವನ ಸೆಟ್ಲ್​ ಆಯಿತು ಎಂದು ಎಲ್ಲರೂ ಅಂದುಕೊಂಡಿದ್ದರು.

Ad
300x250 2

ಆದರೆ ಈಗ ಅವರ ಕುಟುಂಬಕ್ಕೆ ಸಂಕಷ್ಟ ಎದುರಾಗಿದೆ. ಬರೋಬ್ಬರಿ 250 ಕೋಟಿ ರೂಪಾಯಿ ಸಾಲದ ಸುಳಿಗೆ ಜಾಕಿ ಭಗ್ನಾನಿ ಸಿಲುಕಿಕೊಂಡಿದ್ದು ಇದರಿಂದ ಆಸ್ತಿ ಮಾರಿಕೊಳ್ಳುವ ಪರಿಸ್ಥಿತಿ ಬಂದಿದೆ.

ಜಾಕಿ ಭಗ್ನಾನಿ ಅವರು ‘ಪೂಜಾ ಎಂಟರ್​ಟೇನ್ಮೆಂಟ್​’ ಹೆಸರಿನ ನಿರ್ಮಾಣ ಸಂಸ್ಥೆಯನ್ನು ಹೊಂದಿದ್ದಾರೆ. ಈ ಸಂಸ್ಥೆಯಿಂದ ಇತ್ತೀಚಿನ ವರ್ಷಗಳಲ್ಲಿ ನಿರ್ಮಾಣವಾದ ಸಿನಿಮಾಗಳೆಲ್ಲವೂ ಹೀನಾಯವಾಗಿ ಸೋತಿವೆ. ಈ ವರ್ಷ ತೆರೆಕಂಡ ‘ಬಡೆ ಮಿಯಾ ಚೋಟೆ ಮಿಯಾ’ ಸಿನಿಮಾಗೆ ಬಂಡವಾಳ ಹೂಡಿದ್ದು ಕೂಡ ಇದೇ ಸಂಸ್ಥೆ. ಅಂದಾಜು 350 ಕೋಟಿ ರೂಪಾಯಿ ಬಜೆಟ್​ನಲ್ಲಿ ನಿರ್ಮಾಣವಾದ ಆ ಸಿನಿಮಾ ಫ್ಲಾಪ್​ ಆಯಿತು. ಹಾಗಾಗಿ ನಿರ್ಮಾಪಕರ ಪರಿಸ್ಥಿತಿ ಇನ್ನಷ್ಟು ಹದಗೆಟ್ಟಿತು.

ತಮ್ಮ ಸಂಸ್ಥೆಯಲ್ಲಿ ಕೆಲಸ ಮಾಡುವ ಅನೇಕ ಉದ್ಯೋಗಿಗಳಿಗೆ ಜಾಕಿ ಭಗ್ನಾನಿ ಅವರು ಹಲವು ತಿಂಗಳಿಂದ ಸಂಬಳವನ್ನೇ ನೀಡಿಲ್ಲ. ಅವರ ಒಟ್ಟು ಸಾಲು 250 ಕೋಟಿ ರೂಪಾಯಿ ತಲುಪಿದೆ ಎನ್ನಲಾಗಿದೆ. ಹಾಗಾಗಿ ಅವರು ‘ಪೂಜಾ ಎಂಟರ್​ಟೇನ್ಮೆಂಟ್​’ ಆಫೀಸ್​ ಇದ್ದ ಕಟ್ಟಡವನ್ನು ಮಾರಾಟ ಮಾಡಿದ್ದಾರೆ. 7 ಮಹಡಿಗಳನ್ನು ಹೊಂದಿದ್ದ ಕಟ್ಟಡ ಮಾರಾಟ ಆಗಿದೆ. ಅದನ್ನು ಯಾರು ಖರೀದಿಸಿದ್ದಾರೆ ಎಂಬ ಮಾಹಿತಿ ಇನ್ನೂ ಬಹಿರಂಗ ಆಗಿಲ್ಲ. ಆ ಕಟ್ಟಡವನ್ನು ನೆಲಸಮ ಮಾಡಿ, ಅದೇ ಜಾಗದಲ್ಲಿ ಅಪಾರ್ಟ್​ಮೆಂಟ್​ ಕಟ್ಟಲಾಗುತ್ತದೆ ಎಂಬ ಸುದ್ದಿ ಕೇಳಿ ಬಂದಿದೆ.

‘ಪೂಜಾ ಎಂಟರ್​ಟೇನ್ಮೆಂಟ್​’ ಸಂಸ್ಥೆಯು ಭಾರಿ ನಷ್ಟ ಅನುಭವಿಸಿದ್ದು, ಶೇಕಡ 80ರಷ್ಟು ಕೆಲಸಗಾರರನ್ನು ಮನೆಗೆ ಕಳಿಸಲಾಗಿದೆ. ಬಹುತೇಕ ಯಾರಿಗೂ ಸಂಬಳ ನೀಡಿಲ್ಲ ಎನ್ನಲಾಗಿದೆ. ಹಾಗಾಗಿ ಕೋಪಗೊಂಡ ಕೆಲವರು ಸೋಶಿಯಲ್​ ಮೀಡಿಯಾದಲ್ಲಿ ಈ ಕಂಪನಿ ಬಗ್ಗೆ, ನಿರ್ಮಾಪಕರಾದ ಜಾಕಿ ಭಗ್ನಾನಿ ಹಾಗೂ ವಶು ಭಗ್ನಾನಿ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Ad
Ad
Nk Channel Final 21 09 2023
Ad