Bengaluru 24°C
Ad

ವಾಟರ್​ಪಾರ್ಕ್​ನಲ್ಲಿ ಗುಂಡಿನ ದಾಳಿ; ಇಬ್ಬರು ಮಕ್ಕಳು ಸೇರಿ 8 ಮಂದಿಗೆ ಗಾಯ

Shoot

ಅಮೆರಿಕದ ಮಿಚಿಗನ್ ರಾಜ್ಯದ ಅತಿದೊಡ್ಡ ನಗರವಾದ ಡೆಟ್ರಾಯಿಟ್​ ಬಳಿಯ ವಾಟರ್​ಪಾರ್ಕ್​ನಲ್ಲಿ ಗುಂಡಿನ ದಾಳಿ ನಡೆದಿದೆ. ಈ ದಾಳಿಯಲ್ಲಿ ಇಬ್ಬರು ಮಕ್ಕಳು ಸೇರಿದಂತೆ 8 ಮಂದಿ ಗಾಯಗೊಂಡಿದ್ದಾರೆ. ರೋಷೆಸ್ಟರ್​ ಹಿಲ್ಸ್​ನ ಚಿಲ್ಡ್ರನ್ ವಾಟರ್ ಪಾ್ಕ್​ನಲ್ಲಿ ಈ ದಾಳಿ ನಡೆದಿದೆ.

Ad
300x250 2

ಓಕ್ಲ್ಯಾಂಡ್​ ಕೌಂಟಿಯಲ್ಲಿ ಆರೋಪಿ ಗುಂಡಿನ ದಾಳಿಯ ನಂತರ ಹತ್ತಿರದ ಮನೆಯೊಂದರಲ್ಲಿ ಅಡಗಿಕುಳಿತಿದ್ದ. ಪೊಲೀಸರು ಮನೆಯನ್ನು ಸುತ್ತುವರೆದು ಒಳಗೆ ಪ್ರವೇಶಿಸಿದಾಗ ಶಂಕಿತ ವ್ಯಕ್ತಿಯ ಶವ ಅಲ್ಲಿ ಇತ್ತು. ಗುಂಡಿನ ದಾಳಿಯಲ್ಲಿ ಗಾಯಗೊಂಡವರನ್ನು ಕೂಡಲೇ ಆಸ್ಪತ್ರೆಗೆ ರವಾನಿಸಲಾಗಿದೆ.

ಶನಿವಾರ ಸಂಜೆ 5ಗಂಟೆ ವೇಳೆಗೆ ರೋಚೆಸ್ಟರ್​ ಹಿಲ್ಸ್​ನ ಆಬರ್ನ್​ ಸ್ಪ್ಲಾಶ್​ ಪ್ಯಾಡ್​ಗೆ ಆಗಮಿಸಿದ್ದ ಆರೋಪಿ ತನ್ನ ವಾಹನದಿಂದ ಇಳಿದು ಗುಂಡು ಹಾರಿಸಲು ಶುರು ಮಾಡಿದ್ದ, 9 ಎಂಎಂ ಸೆಮಿ ಆಟೋಮ್ಯಾಟಿಕ್ ಗ್ಲಾಕ್​ನಿಂದ 28 ಸುತ್ತು ಗುಂಡು ಹಾರಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಘಟನಾ ಸ್ಥಳದಿಂದ ಬಂದೂಕು ಹಾಗೂ ಮೂರು ಖಾಲಿ ಮ್ಯಾಗಜೀನ್​ಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಬಂದೂಕಿನಿಂದ ಗುಂಡಿನ ದಾಳಿ ನಡೆದಿದೆ ಎಂದು ಹೇಳಲಾಗಿದೆ.

Ad
Ad
Nk Channel Final 21 09 2023
Ad