Ad

ವಿದ್ಯಾರ್ಥಿನಿ ಪ್ರಬುದ್ಧ ಬರ್ಬರ ಕೊಲೆ : ಕೇಸ್‌ನ್ನು ಸಿಐಡಿಗೆ ವಹಿಸಿದ ಸರ್ಕಾರ

ಕಳೆದ ಮೇ15 ರಂದು ಸುಬ್ರಹ್ಮಣ್ಯಪುರ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಪ್ರಬುದ್ಧ ಕೊಲೆ ಪ್ರಕರಣ ರಾಜ್ಯ ಸರ್ಕಾರ ಸಿಐಡಿಗೆ ವಹಿಸಿದೆ.

ಬೆಂಗಳೂರು: ಕಳೆದ ಮೇ15 ರಂದು ಸುಬ್ರಹ್ಮಣ್ಯಪುರ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಪ್ರಬುದ್ಧ ಕೊಲೆ ಪ್ರಕರಣ ರಾಜ್ಯ ಸರ್ಕಾರ ಸಿಐಡಿಗೆ ವಹಿಸಿದೆ. ಪ್ರಬುದ್ಧ ಅವರ ಕೊಲೆಗೆ ದಿಗ್ಬ್ರಾಂತರಾಗಿದ್ದ ತಾಯಿ ಸೌಮ್ಯ ಸಿಎಂ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದರು. ಈ ಪ್ರಕರಣದಲ್ಲಿ ಪೊಲೀಸರ ಅಸಹಕಾರ, ಉದ್ದೇಶಪೂರ್ವಕ ನಿರ್ಲಕ್ಷತೆ, ಸಾಕ್ಷಿ ನಾಶ ಯತ್ನ ನಡೆದಿದೆ. ಸಂತ್ರಸ್ಥ ತಾಯಿಯಾದ ನನಗೂ ಬೆದರಿಕೆ ಹಾಕಲಾಗುತ್ತಿದೆ. ಹೀಗಾಗಿ ಸಿಐಡಿ ತನಿಖೆಗೆ ವಹಿಸಲು ಒತ್ತಾಯಿಸಿದ್ದರು.

Ad
300x250 2

ಯುವತಿ ಪ್ರಬುದ್ಧ ತಾಯಿಯ ಮನವಿ ಹಿನ್ನೆಲೆಯಲ್ಲಿ ಕೊಲೆ ಪ್ರಕರಣವನ್ನು ಸಿಎಂ ಸಿದ್ದರಾಮಯ್ಯ ಸಿಐಡಿ ತನಿಖೆಗೆ ವಹಿಸಲು ಪೊಲೀಸ್ ಮಹಾನಿರ್ದೇಶಕ ಅಲೋಕ್ ಮೋಹನ್‌ ಅವರಿಗೆ ಸೂಚನೆ ನೀಡಿದ್ದಾರೆ.

Ad
Ad
Nk Channel Final 21 09 2023
Ad