ಉತ್ತರ ಪ್ರದೇಶ: ಮೊಬೈಲ್ನಲ್ಲಿ ಅಶ್ಲೀಲ ವಿಡಿಯೋಗಳನ್ನು ನೋಡುತ್ತಾ ಅಪ್ರಾಪ್ತೆ ತಂಗಿಯ ಮೇಲೆ ಅಣ್ಣನೇ ಅತ್ಯಾಚಾರವೆಸಗಿದ್ದಾನೆ. ಬಳಿಕ ಎಲ್ಲಿ ತನ್ನ ವಿಚಾರ ಬೆಳಕಿಗೆ ಬಂದು ಬಿಡುತ್ತೋ ಎನ್ನುವ ಭಯದಲ್ಲಿ ಆಕೆಯನ್ನು ಕೊಲೆ ಮಾಡಿದ ಘಟನೆ ಬೆಳಕಿಗೆ ಬಂದಿದೆ.
ಆರೋಪಿ ಯುವಕ(19 ವರ್ಷ)ನನ್ನು ಬಂಧಿಸಲಾಗಿದೆ. ಆರೋಪಿಯನ್ನು ಸಂಜು ಎಂದು ಗುರುತಿಸಲಾಗಿದ್ದು, ಫೆಬ್ರವರಿ 3 ರ ರಾತ್ರಿ ಈ ಕೃತ್ಯ ನಡೆದಿದೆ. ಫೆಬ್ರವರಿ 4 ರಂದು ಸಂತ್ರಸ್ತೆಯ ಚಿಕ್ಕಪ್ಪ ತನ್ನ ಸೋದರಳಿಯ ಸಂಜು ಕುಮಾರ್ ವಿರುದ್ಧ ದೂರು ನೀಡಿದಾಗ ಘಟನೆ ಬೆಳಕಿಗೆ ಬಂದಿದೆ. ದೂರಿನ ಮೇರೆಗೆ ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ.
ವಿಚಾರಣೆ ವೇಳೆ ತಂದೆ ಒಂದು ವರ್ಷದ ಹಿಂದೆ ಮೃತಪಟ್ಟಿದ್ದು, ತಾಯಿ ಹಾಗೂ ಸಹೋದರಿಯೊಂದಿಗೆ ಗ್ರಾಮದ ಬೇರೆ ಮನೆಯಲ್ಲಿ ವಾಸವಾಗಿರುವುದಾಗಿ ತಿಳಿಸಿದ್ದಾರೆ. ಘಟನೆಯ ದಿನ ಅವನ ತಾಯಿ ತನ್ನ ಚಿಕ್ಕಪ್ಪನ ಮನೆಗೆ ಹೋಗಿದ್ದಳು ಎಂದು ತಿಳಿದುಬಂದಿದೆ.
ಸದ್ಯ ಆರೋಪಿಯಿಂದ ಮೊಬೈಲ್ ಹಾಗೂ ಅದರಲ್ಲಿ ಆತ ವೀಕ್ಷಿಸಿದ್ದ ಪೋರ್ನ್ ಕ್ಲಿಪ್ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಆರೋಪಿಯನ್ನು ಜೈಲಿಗೆ ಕಳುಹಿಸಲಾಗಿದೆ.