News Karnataka Kannada
Friday, May 17 2024
ಉತ್ತರ ಪ್ರದೇಶ

ಕುಶಿನಗರ: ಒಂದೂವರೆ ವರ್ಷದ ಮಗುವಿನ ಮೇಲೆ ಅತ್ಯಾಚಾರವೆಸಗಿದ ವ್ಯಕ್ತಿ ಬಂಧನ

Uttar Pradesh hospital has cradle of orphaned children
Photo Credit : Pixabay

ಕುಶಿನಗರ: ಉತ್ತರ ಪ್ರದೇಶದ ಕುಶಿನಗರ ಜಿಲ್ಲೆಯಲ್ಲಿ ತನ್ನ ನೆರೆಹೊರೆಯ ಒಂದೂವರೆ ವರ್ಷದ ಹೆಣ್ಣುಮಗುವಿನ ಮೇಲೆ ಅತ್ಯಾಚಾರವೆಸಗಿದ ಆರೋಪದ ಮೇಲೆ 22 ವರ್ಷದ ಯುವಕನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪೊಲೀಸರ ಪ್ರಕಾರ, ಕುಶಿನಗರ ಜಿಲ್ಲೆಯ ವಿಷ್ಣುಪುರ ಪ್ರದೇಶದ ನಿವಾಸಿ ರವಿ ರಾಯ್ ಆಗಾಗ್ಗೆ ಹುಡುಗಿಯೊಂದಿಗೆ ಆಟವಾಡುತ್ತಿದ್ದನು. ರಾಯ್ ಮಗುವಿನ ಮನೆಗೆ ಬಂದು ಚಾಕೊಲೇಟ್ ಖರೀದಿಸಲು ಅವಳನ್ನು ಕರೆದೊಯ್ದಿದ್ದನು.

ಎರಡು ಗಂಟೆಗಳ ನಂತರವೂ ರಾಯ್ ಹಿಂತಿರುಗದಿದ್ದಾಗ, ಹುಡುಗಿಯ ಕುಟುಂಬ ಸದಸ್ಯರು ಅವರ ಮನೆಗೆ ಹೋಗಿ ತಮ್ಮ ಮಗಳ ಬಗ್ಗೆ ವಿಚಾರಿಸಿದ್ದಾರೆ.  ನಂತರ ಬಾಲಕಿಯ ಕುಟುಂಬ ಸದಸ್ಯರು ಪೊಲೀಸರಿಗೆ ಮಾಹಿತಿ ನೀಡಿದರು.

ಪೊಲೀಸ್ ವಿಚಾರಣೆಯ ಸಮಯದಲ್ಲಿ, ಆರೋಪಿಯು ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ್ದನ್ನು ಒಪ್ಪಿಕೊಂಡಿದ್ದಾನೆ.

ಬಾಲಕಿಯ ಕುಟುಂಬ ಸದಸ್ಯರ ಲಿಖಿತ ದೂರಿನ ಮೇರೆಗೆ, ಪೊಲೀಸರು ವ್ಯಕ್ತಿಯ ವಿರುದ್ಧ ಭಾರತೀಯ ದಂಡ ಸಂಹಿತೆ ಮತ್ತು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ.

ಹೆಚ್ಚುವರಿ ಪೊಲೀಸ್ ಅಧೀಕ್ಷಕ ರಿತೇಶ್ ಕುಮಾರ್ ಸಿಂಗ್, “ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ ಮತ್ತು ಹೆಣ್ಣು ಮಗು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದೆ” ಎಂದು ಹೇಳಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
30409

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು