ದೆಹಲಿ: ಪಶ್ಚಿಮ ಬಂಗಾಳದ ಡಾರ್ಜಿಲಿಂಗ್ನ ಮಹಿಳೆಯೊಬ್ಬಳ ಮೇಲೆ ದೆಹಲಿಯಲ್ಲಿ ಒಂದು ವಾರ ಕಾಲ ಆಕೆಯ ಸ್ನೇಹಿತ ಅತ್ಯಾಚಾರವೆಸಗಿದ್ದಾನೆ ಎಂದು ತಿಳಿದುಬಂದಿದೆ.
ಆರೋಪಿಯನ್ನು ಪರಾಸ್ (28) ಎಂದು ಗುರುತಿಸಲಾಗಿದೆ. ಅತ್ಯಾಚಾರ, ಲೈಂಗಿಕ ಕಿರುಕುಳ ಮತ್ತು ನೋವುಂಟು ಮಾಡಿದ ಆರೋಪದ ಮೇಲೆ ಪ್ರಕರಣ ದಾಖಲಿಸಲಾಗಿದೆ. ಫೆಬ್ರವರಿ 2 ರಂದು ಅವರನ್ನು ಬಂಧಿಸಲಾಗಿದೆ.
ಪೊಲೀಸರ ಪ್ರಕಾರ, ಜನವರಿ 30 ರಂದು ನೆಬ್ ಸರೈ ಪೊಲೀಸ್ ಠಾಣೆಗೆ ಪಿಸಿಆರ್ ಕರೆ ಬಂದಾಗ ಮಹಿಳೆಯೊಬ್ಬಳು ವ್ಯಕ್ತಿ ತನಗೆ ಥಳಿಸುತ್ತಿದ್ದಾನೆ ಎಂದು ಮಾಹಿತಿ ನೀಡಿದ್ದಳು. ಸ್ಥಳಕ್ಕೆ ಧಾವಿಸಿದ ಪೊಲೀಸ್ ತಂಡ ಮಹಿಳೆಯನ್ನು ರಕ್ಷಿಸಿ ಏಮ್ಸ್ಗೆ ರವಾನಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಿದಾಗ ಆಕೆಯ ದೇಹದಲ್ಲಿ ಸುಮಾರು 20 ಗಾಯಗಳ ಗುರುತುಗಳಿದ್ದವು. ಆಕೆಯನ್ನು ಇತ್ತೀಚೆಗೆ ಡಿಸ್ಚಾರ್ಜ್ ಮಾಡಲಾಗಿದೆ.
ವಿಚಾರಣೆ ವೇಳೆ, ಮಹಿಳೆಯು ಪಶ್ಚಿಮ ಬಂಗಾಳದ ಡಾರ್ಜಿಲಿಂಗ್ನಿಂದ ಬಂದಿದ್ದೇನೆ ಮತ್ತು ಆರೋಪಿಯೊಂದಿಗೆ ಫೋನ್ನಲ್ಲಿ ಸಂಪರ್ಕಕ್ಕೆ ಬಂದಿದ್ದೇನೆ ಎಂದು ಆಕೆ ಹೇಳಿದ್ದಾಗಿ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.