News Karnataka Kannada
Monday, April 29 2024
ಉತ್ತರ ಪ್ರದೇಶ

ಬರೇಲಿ: ಮನೆ ಛಾವಣಿಯಿಂದ ನಾಲ್ಕು ತಿಂಗಳ ಮಗುವನ್ನು ನೆಲಕ್ಕೆಸೆದ ಕೋತಿ!

ಅಂಕೋಲಾ ತಾಲೂಕಿಗೆ ಮಂಗನ ಕಾಯಿಲೆ ವ್ಯಾಪಿಸಿದ್ದು, ತಾಲೂಕಿನ ಮಾವಿನಕೇರಿ ಗ್ರಾಮದ ವ್ಯಕ್ತಿಯಲ್ಲಿ ಕಾಯಿಲೆ ಕಂಡು ಬಂದಿದೆ.
Photo Credit : Pexels

ಬರೇಲಿ: ಉತ್ತರ ಪ್ರದೇಶದ ಬರೇಲಿಯ ಗ್ರಾಮಾಂತರ ಪ್ರದೇಶದಲ್ಲಿ ಮೂರು ಅಂತಸ್ತಿನ ಮನೆಯ ಛಾವಣಿಯಿಂದ ಮಗುವನ್ನು ಕೋತಿ ಎಸೆದ ಪರಿಣಾಮ ನಾಲ್ಕು ತಿಂಗಳ ಗಂಡು ಮಗು ಸಾವನ್ನಪ್ಪಿದ ಘಟನೆ ನಡೆದಿದೆ.

ಈ ಕುರಿತು  ತನಿಖೆ ನಡೆಸಲು ಅರಣ್ಯ ಇಲಾಖೆಯ ತಂಡವನ್ನು ಕಳುಹಿಸಲಾಗಿದೆ ಎಂದು ಬರೇಲಿ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಲಲಿತ್ ವರ್ಮಾ ತಿಳಿಸಿದ್ದಾರೆ.

ಬರೇಲಿಯ ಡುಂಕಾ ಗ್ರಾಮದ ನಿವಾಸಿ ನಿರ್ದೇಶ್ ಉಪಾಧ್ಯಾಯ (25) ಅವರು ಶುಕ್ರವಾರ ಸಂಜೆ ತಮ್ಮ ಪತ್ನಿ ಮತ್ತು ನಾಲ್ಕು ತಿಂಗಳ ಮಗುವಿನೊಂದಿಗೆ ತಮ್ಮ ಮೂರು ಅಂತಸ್ತಿನ ಮನೆಯ ಟೆರೇಸ್ ಮೇಲೆ ನಡೆದುಕೊಂಡು ಹೋಗುತ್ತಿದ್ದರು. ಈ ವೇಳೆ ಇದ್ದಕ್ಕಿದ್ದಂತೆ ಕೋತಿಗಳ ಹಿಂಡು ಛಾವಣಿಯ ಮೇಲೆ ಬಂದವು. ದಂಪತಿಗಳು ಮಂಗಗಳನ್ನು ಓಡಿಸಲು ಪ್ರಯತ್ನಿಸಿದರು.

ಆದರೆ ಕೋತಿಗಳ ಹಿಂಡು ನಿರ್ದೇಶ್ ಅವರನ್ನು ಸುತ್ತುವರಿಯಿತು. ಕೂಡಲೇ ಅವರು ಮೆಟ್ಟಿಲುಗಳ ಕಡೆಗೆ ಓಡಲು ಪ್ರಯತ್ನಿಸಿದಾಗ, ಮಗು ಅವನ ಕೈಯಿಂದ ಕೆಳಗೆ ಬಿದ್ದಿತು. ಕೋತಿಯೊಂದು ಬಂದು ನವಜಾತ ಶಿಶುವನ್ನು ಹಿಡಿದು ಛಾವಣಿಯಿಂದ ಎಸೆದಿದೆ. ನೆಲಕ್ಕೆ ಬಿದ್ದ ಮಗು ಸ್ಥಳದಲ್ಲಿಯೇ ಸಾವನ್ನಪ್ಪಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12790
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು