News Karnataka Kannada
Tuesday, May 07 2024
ಉತ್ತರ ಪ್ರದೇಶ

ಪ್ರಿಯಕರನ ಜೊತೆ ಸೇರಿ ತಂದೆ ತಾಯಿಯನ್ನು ಕೊಲೆ ಮಾಡಿದ ಮಗಳು

Murder
Photo Credit :

ಉತ್ತರ ಪ್ರದೇಶ : ಈಗಿನ ಮಕ್ಕಳು  ಬೇಗ ದೊಡ್ಡವರಾಗಿ ಬಿಡುತ್ತಾರೆ. ಶಾಲೆ ಮೆಟ್ಟಿಲು ಹತ್ತುವ ಮೊದಲೇ ಮೊಬೈಲ್  ಆಪರೇಟ್‌  ಮಾಡೋಕೆ ಕಲಿತಿರುತ್ತಾರೆ. ಅದರೊಂದಿಗೆ ಆಧುನಿಕ ಜೀವನದೊಂದಿಗೆ ತೆರೆದುಕೊಂಡು, ಆ ವಯಸ್ಸಲ್ಲಿ ಕಲಿಯಬಾರದ್ದನ್ನೆಲ್ಲ ಕಲಿತಿರುತ್ತಾರೆ.

ಹೈಸ್ಕೂಲ್‌  ಸೇರುವ ಮುನ್ನವೇ ಪ್ರೀತಿ ಪ್ರೇಮ ಅಂತ ಓಡಾಡ್ತಾರೆ. ಮನೆಯವರಿಗೆ ಏನೂ ಗೊತ್ತಿರೋದಿಲ್ಲ, ಕೊನೆಗೊಮ್ಮೆ ಗೊತ್ತಾಗುವಷ್ಟರಲ್ಲಿ ಕಾಲವೇ ಮಿಂಚಿರುತ್ತದೆ. ಇಲ್ಲಿ ಆಗಿದ್ದೂ ಅದೇ, ಶಾಲೆಗೆ ಹೋಗುವ 16ರ ಬಾಲೆ , ಪ್ರೀತಿ ಪ್ರೇಮದಲ್ಲಿ ಮುಳುಗಿದ್ದಳು. ಕೊನೆಗೊಮ್ಮೆ ಆಕೆಯ ಪ್ರೀತಿಯ ವಿಚಾರ ಮನೆಯಲ್ಲಿ ಗೊತ್ತಾಗಿದೆ. ಇದು ಸರಿಯಲ್ಲ ಮಗಳೇ, ಚೆನ್ನಾಗಿ ಕೋ ಮೊದಲು ಅಂತ ಅಪ್ಪ , ಅಮ್ಮ  ಬುದ್ಧಿ ಹೇಳಿದ್ದಾರೆ. ಅಷ್ಟಕ್ಕೇ ಸಿಟ್ಟಾದ ಆ 16 ವರ್ಷದ ಬಾಲಕಿ ತನ್ನ 20 ವರ್ಷದ ಪ್ರಿಯಕರನೊಂದಿಗೆ  ಸೇರಿಕೊಂಡು ಮಾಡಬಾರದ್ದು ಮಾಡಿದ್ದಾಳೆ.

ಉತ್ತರ ಪ್ರದೇಶದ ಬಿಜ್ನೋರ್ ಎಂಬಲ್ಲಿ ಭಯಾನಕ ಘಟನೆಯೊಂದು ನಡೆದು ಹೋಗಿದೆ. ಅಮ್ರೋಹಾ ಎಂಬಲ್ಲಿನ ಗ್ರಾಮದಲ್ಲಿ ಮಾರ್ಚ್ 6ರಂದು ಸುಮಾರು 53 ವರ್ಷದ ವ್ಯಕ್ತಿಯ ಶವ ಅವರ ಮನೆಯಲ್ಲೇ ಪತ್ತೆಯಾಗಿತ್ತು. ಅವರು ತಮ್ಮ ಪತ್ನಿ ಹಾಗೂ 16 ವರ್ಷದ ಮಗಳೊಂದಿಗೆ ವಾಸಿಸುತ್ತಾ ಇದ್ದರು. ಆದ್ರೆ ಅಂದು ಅವರು ಏಕಾಏಕಿ ಕೊಲೆಯಾಗಿದ್ದರು. ಅವರ ಶವ ಮನೆಯಲ್ಲೇ ಪತ್ತೆಯಾಗಿತ್ತು. ಈ ಬಗ್ಗೆ ದೂರು ದಾಖಲಿಸಿಕೊಂಡ ಸ್ಥಳೀಯ ಪೊಲೀಸರು ಅಪರಾಧಿಗಳನ್ನು ಪತ್ತೆ ಹಚ್ಚುವ ಕೆಲಸದಲ್ಲಿ ತೊಡಗಿದ್ದರು.

ಈ ಕೊಲೆಯ ತನಿಖೆ ನಡೆಯುತ್ತಿರುವಾಗಲೇ ಅದೇ ಮನೆಯಲ್ಲಿ ಮತ್ತೊಂದು ಕೊಲೆಯಾಗಿತ್ತು. ಅದು ಮಾರ್ಚ್ 6ರಂದು ಸತ್ತಿದ್ದ ವ್ಯಕ್ತಿಯ ಪತ್ನಿಯದ್ದು. 50 ವರ್ಷದ ಅವರ ಪತ್ನಿಯನ್ನು ಮಾರ್ಚ್ 15ರಂದು ಅದೇ ರೀತಿ ಭಯಾನಕವಾಗಿ ಕೊಲೆ ಮಾಡಲಾಗಿತ್ತು.

ಒಂದೇ ಮನೆಯಲ್ಲಿ ತೀರಾ ಕಡಿಮೆ ಅವಧಿಯಲ್ಲಿ ಎರಡೆರಡು ಕೊಲೆ ನಡೆದಿತ್ತು. ಈಗ ಅಲ್ಲಿ ಉಳಿದಿರೋದು 16 ವರ್ಷದ ಅವರ ಮಗಳು ಮಾತ್ರ. ಹಂತಕ ಆಕೆಯನ್ನೂ ಟಾರ್ಗೆಟ್‌ ಮಾಡಿ ಕೊಲ್ಲಬಹುದಾ ಅಂತ ಪೊಲೀಸರು ಆತಂಕಗೊಂಡಿದ್ದರು.

16ರ ವಯಸ್ಸಿನ ಹುಡುಗಿ ಬಗ್ಗೆ ಪೊಲೀಸರೇ ಆತಂಕಗೊಂಡಿದ್ದರು. ಆದರೆ ಆಕೆ ಮಾತ್ರ ಏನೂ ನಡೆದೇ ಇಲ್ಲ ಎನ್ನುವಂತೆ ಇದ್ದಳು. ಇದರಿಂದ ಆಕೆ ಮೇಲೆಯೇ ಪೊಲೀಸರು ಅನುಮಾನಪಟ್ಟರು. ಠಾಣೆಗೆ ಕರೆಸಿ ವಿಚಾರಿಸಿದಾಗ ಆಕೆಯೇ ಭಯಾನಕ ಸತ್ಯವನ್ನು ಹೊರ ಹಾಕಿದ್ದಳು.

ಆ 16 ವರ್ಷದ ಹುಡುಗಿಯೇ ತಾನೇ ತನ್ನ ತಂದೆ ತಾಯಿಯನ್ನು ಕೊಲೆ ಮಾಡಿದ್ದಾಗಿ ಒಪ್ಪಿಕೊಂಡಳು. ಮೊದಲು ತಾಯಿಗೆ ಗೊತ್ತಾಗದಂತೆ ತಂದೆಯನ್ನು ಕೊಂದಿದ್ದಳು. ಬಳಿಕ ತಾಯಿಯನ್ನೂ ಕೊಂದು, ಅಳುವ ನಾಟಕವಾಡಿದ್ದಳು. ಇದಕ್ಕೆ ಕಾರಣ ಆಕೆಯ ಪ್ರೀತಿ. ಪ್ರೀತಿಯನ್ನು ವಿರೋಧಿಸಿದ್ದಕ್ಕೆ ತಂದೆ ತಾಯಿಯನ್ನು ಕೊಂದಿದ್ದಾಗಿ ಆ ಬಾಲಕಿ ಹೇಳಿದ್ದಾಳೆ.

ಈ 16 ವರ್ಷದ ಬಾಲಕಿ 20 ವರ್ಷದ ಯುವಕನನ್ನು ಪ್ರೀತಿಸುತ್ತಾ ಇದ್ದಳು. ಇದು ಮನೆಯವರಿಗೆ ಗೊತ್ತಾಗಿ ವಿರೋಧ ವ್ಯಕ್ತಪಡಿಸಿದ್ದರು. ಇದು ಸರಿಯಲ್ಲ ಮಗಳೇ, ಚೆನ್ನಾಗಿ ಕೋ ಮೊದಲು ಅಂತ ಅಪ್ಪ ಹಾಗೂ ಅಮ್ಮ ಇಬ್ಬರೂ ಬುದ್ಧಿ ಹೇಳಿದ್ದಾರೆ. ಇದರಿಂದ ಕೋಪಗೊಂಡ ಹುಡುಗಿ, ತನ್ನ ಪ್ರಿಯಕರನ ಜೊತೆ ಸೇರಿಕೊಂಡು ಹೆತ್ತವರಿಬ್ಬರನ್ನೂ ಕೊಂದು ಮುಗಿಸಿದ್ದಾಳೆ.

ಇನ್ನು ಹುಡುಗಿ ಬಾಯ್ಬಿಡುತ್ತಿದ್ದಂತೆ ಪೊಲೀಸರೇ ಒಂದು ಕ್ಷಣ ಆಘಾತಕ್ಕೆ ಒಳಗಾಗಿದ್ದಾರೆ. ಬಳಿಕ 17 ವರ್ಷದ ಬಾಲಕಿಯನ್ನು ಹಾಗೂ ಆಕೆಯ 20 ವರ್ಷದ ಗೆಳೆಯ ಇಬ್ಬರನ್ನೂ ಬಿಜ್ನೋರ್ ಪೊಲೀಸರು ಬಂಧಿಸಿದ್ದಾರೆ. ಬಾಲ ಮಂಡಳಿಯ ಮುಂದೆ ಹಾಜರುಪಡಿಸಿದ ನಂತರ ಬಾಲಕಿಯನ್ನು ಬಾಲಾಪರಾಧಿಗೃಹಕ್ಕೆ ಕಳುಹಿಸಲಾಗಿದ್ದು, ಬಾಲಕನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12790
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು