News Karnataka Kannada
Sunday, May 19 2024
ವಿಜಯಪುರ

ಲೋಕಸಭೆ ಚುನಾವಣೆ : ಕುಟುಂಬ ಸಮೇತ ಮತದಾನ ಮಾಡಿದ ರಮೇಶ್ ಜಿಗ್ಜಣಿಗಿ

ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಸಂಸದ ರಮೇಶ ಜಿಗಜಿಣಗಿ ಅವರು ಕುಟುಂಬ ಸಮೇತ ಮಂಗಳವಾರ ಬೆಳಿಗ್ಗೆ ಮತ ಚಲಾಯಿಸಿದರು.
Photo Credit : NewsKarnataka

ವಿಜಯಪುರ: ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಸಂಸದ ರಮೇಶ ಜಿಗಜಿಣಗಿ ಅವರು ಕುಟುಂಬ ಸಮೇತ ಮಂಗಳವಾರ ಬೆಳಿಗ್ಗೆ ಮತ ಚಲಾಯಿಸಿದರು.

ವಿಜಯಪುರ ನಗರ ಮತಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ಭೂತನಾಳ ತಾಂಡಾದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮತಗಟ್ಟೆ 14 ರಲ್ಲಿ ಮತ ಚಲಾಯಿಸಿದರು. ಸಂಸದ ರಮೇಶ ಜಿಗಜಿಣಗಿ ಹಾಗೂ ಅವರ ಇಬ್ಬರು ಮಕ್ಕಳಾದ ಆನಂದ, ವಿನೋದ, ಸೋಸೆಯಂದಿಯರಾದ ರೇಷ್ಮಾ ಗೀತಾ, ಮೊಮ್ಮಗಳು ಸ್ನೇಹಾ ಮತಚಲಾಯಿಸಿದರು.

ಮೊಮ್ಮಗಳು ಸ್ನೇಹಾ ಇದೆ ಮೊದಲಬಾರಿಗೆ ಮತ ಚಲಾಯಿಸಿದರು. ಮತ ಚಲಾಯಿಸಿದ ನಂತರ ಮಾಧ್ಯಮದ ಜೊತೆ ಮಾತನಾಡಿದ ರಮೇಶ ಜಿಗಜಿಣಗಿ ಅವರು, ಕೇವಲ ಭೂತನಾಳ ಮಾತ್ರವಲ್ಲದೆ ಜಿಲ್ಲೆಯ ಎಲ್ಲೆಡೆ ಬಿಜೆಪಿ ವಾತಾವಣ ಚೆನ್ನಾಗಿದೆ. ಜಿಲ್ಲೆಯ ವಿವಿಧ ಎಲ್ಲ ಗ್ರಾಮಗಳಿಂದ ಕರೆ ಬರುತ್ತಿದ್ದು ಉತ್ತಮ ಅಭಿಪ್ರಾಯ ವ್ಯಕ್ತವಾಗುತ್ತಿದೆ ಎಂದರು. ವಿಜಯಪುರದಲ್ಲಿ ಲೋಕಸಭೆ ಚುನಾವಣೆ ಬಿಜೆಪಿಗೆ ಒನ್ ಸೈಡ್ ಆಗಲಿದೆ ಎಂದರು

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
53230
Newskarnataka

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು