ಅಮ್ರೋಹಾ : ಉತ್ತರ ಪ್ರದೇಶದ ಅಮ್ರೋಹಾದಲ್ಲಿ ಮತ್ತೊಂದು ಭೀಕರ ಘಟನೆ ನಡೆದಿದ್ದು, ತನ್ನ ಮಕ್ಕಳ ಒತೆ ಮಲಗಿದ್ದ 25 ವರ್ಷದ ಮಹಿಳೆಯ ಮುಖವನ್ನು ಇಟ್ಟಿಗೆಯಿಂದ ಜಜ್ಜಿ ಹತ್ಯೆ ಮಾಡಿ ಅಪರಿಚಿತರು ಆಕೆಯ ಶವದ ಮೇಲೆ ಅತ್ಯಾಚಾರ ವೆಸಗಿದ್ದಾರೆ.
ಆ ಮಹಿಳೆಯ ಜೊತೆ ಮಲಗಿದ್ದ ಅಪ್ರಾಪ್ತ ಮಕ್ಕಳಿಗೂ ಈ ಘಟನೆಯ ಬಳಿಕ ಸಣ್ಣಪುಟ್ಟ ಗಾಯಗಳಾಗಿವೆ.
ಭಾನುವಾರ ರಾತ್ರಿ ಅಮ್ರೋಹಾದ ಹಳ್ಳಿಯಲ್ಲಿ ಈ ಘಟನೆ ಸಂಭವಿಸಿದ್ದು, ಆ ಮಹಿಳೆಯ ಪತಿ ರಾತ್ರಿ ವೇಳೆ ಹೊಲಕ್ಕೆ ಪಂಪ್ಸೆಟ್ನಿಂದ ನೀರು ಬಿಡಲು ಮನೆಯಿಂದ ಹೊರಗೆ ಹೋಗಿದ್ದರು. ಈ ವೇಳೆ ಮನೆಯೊಳಗೆ ನುಗ್ಗಿದ ದುಷ್ಕರ್ಮಿಗಳು ಮಹಿಳೆಯನ್ನು ಕೊಂದು, ಆಕೆಯ ಶವದ ಮೇಲೆ ಅತ್ಯಾಚಾರ ನಡೆಸಿದ್ದಾರೆ. ಆ ಮಹಿಳೆಯ ಗಂಡ ಹೊಲದಿಂದ ವಾಪಾಸ್ ಮನೆಗೆ ಬಂದಾಗ ತನ್ನ ಹೆಂಡತಿಯ ಶವ ಬೆತ್ತಲೆಯಾಗಿ ಹಾಸಿಗೆಯ ಮೇಲೆ ಬಿದ್ದಿರುವುದನ್ನು ನೋಡಿ ಆಘಾತಕ್ಕೊಳಗಾಗಿದ್ದಾರೆ. ಬಳಿಕ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ.