ನವದೆಹಲಿ: ಸಂಸದ ಬ್ರಿಜ್ಭೂಷಣ್ ಶರಣ್ ಸಿಂಗ್ ವಿರುದ್ಧ ಮಹಿಳಾ ಕುಸ್ತಿಪಟುಗಳು ಲೈಂಗಿಕ ಕಿರುಕುಳ ಎಸಗಿದ ಆರೋಪ ಮಾಡಿದ್ದರು. ಈ ವಿಷಯವಾಗಿ ವಿಚಾರಣೆ ನಡೆಸುತ್ತಿರುವ ದೆಹಲಿ ಪೊಲೀಸರು, ಇಬ್ಬರು ಮಹಿಳಾ ಕುಸ್ತಿಪಟುಗಳ ಬಳಿ ಪೋಟೋ, ಆಡಿಯೋ ಅಥವಾ ವಿಡಿಯೋ ಸಾಕ್ಷಿ ಒದಗಿಸುವಂತೆ ಕೇಳಿದ್ದಾರೆ ಎಂದು ವರದಿಯಾಗಿದೆ. ಪೊಲೀಸರ ಈ ನಡೆಗೆ ಕಪಿಲ್ ಸಿಬಲ್ ಟ್ವೀಟ್ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಕಪಿಲ್ ಸಿಬಲ್, ‘ಬ್ರಿಜ್ ಭೂಷಣ್ ವಿರುದ್ಧ ತನಿಖೆ ವಿಡಿಯೊ, ಆಡಿಯೊ, ಕರೆ ರೆಕಾರ್ಡಿಂಗ್, ವಾಟ್ಸ್ಆಯಪ್ ಸಂದೇಶ ಯಾವುದಾದರೂ ಸಾಕ್ಷಿ ಒದಗಿಸುವಂತೆ ಸಂತ್ರಸ್ತೆಯರ ಬಳಿ ಕೇಳಿದ ದೆಹಲಿ ಪೊಲೀಸರು. ಇದೀಗ ಮಹಿಳೆಯರು ತಮ್ಮ ಮೇಲೆ ನಡೆಯುತ್ತಿರುವ ಲೈಂಗಿಕ ದೌರ್ಜನ್ಯವನ್ನು ಕ್ಯಾಮೆರಾದಲ್ಲಿ ಸೆರೆಹಿಡಿದುಕೊಂಡಿರಬೇಕು ಮತ್ತು ವಿಡಿಯೊ ರೆಕಾರ್ಡ್ ಮಾಡಲು ಯಾರನ್ನಾದರೂ ನೇಮಕ ಮಾಡಿಕೊಳ್ಳಬೇಕು.
ಸಂತ್ರಸ್ತರಿಯರಿಗೆ ಸೂಚನೆ ಬಂದ ನಂತರವೇ ಅವರ ಮೇಲೆ ದೌರ್ಜನ್ಯ ನಡೆಯುತ್ತದೆ’ ಎಂದು ಕಿಡಿಕಾರಿದ್ದಾರೆ. ಇನ್ನು ಬ್ರಿಜ್ಭೂಷಣ್ ವಿರುದ್ಧ ಇದೇ ಜೂನ್ 15ರೊಳಗೆ ಚಾರ್ಜ್ಶೀಟ್ ಸಲ್ಲಿಸುವುದಾಗಿ ಕೇಂದ್ರ ಸರ್ಕಾರ ಕುಸ್ತಿಪಟುಗಳಿಗೆ ಭರವಸೆ ನೀಡಿದೆ.
Brij Bhushan
InvestigationPolice wants video, audio, call recordings, WhatsApp chats as proof
Now victims should be ready to click on the camera and have someone ready to record the assault
For that the assaults will have to take place after notice to victims !
— Kapil Sibal (@KapilSibal) June 11, 2023