News Karnataka Kannada
Sunday, April 28 2024
ತುಮಕೂರು

ತುಮಕೂರು: ಪಟಾಕಿ ಸಿಡಿದು ಸಹಕಾರಿ ಸಚಿವ ಕೆ.ಎನ್.ಆರ್. ಕಣ್ಣಿಗೆ ಗಾಯ, ಆಸ್ಪತ್ರೆ ಯಲ್ಲಿ ಚಿಕಿತ್ಸೆ

Co-operation Minister K.N.R. Eye injury, hospitalised
Photo Credit : News Kannada

ತುಮಕೂರು: ಸಹಕಾರಿ ಸಚಿವ ಕೆ.ಎನ್ ರಾಜಣ್ಣ ಅವರ ಕಣ್ಣಿಗೆ ಪಟಾಕಿ ಸಿಡಿದು ಗಾಯಗೊಂಡ ಘಟನೆ ಪಟ್ಟಣದ ಕುಣಿಗಲ್ ಪಟ್ಟಣದ ಹುಚ್ಚಮಾಸ್ತಿಗೌಡ ವೃತ್ತದಲ್ಲಿ ಜೂ.11ರ ಇಂದು ಭಾನುವಾರ ಬೆಳಗ್ಗೆ ನಡೆದಿದೆ.

ಹಾಸನ ಜಿಲ್ಲಾ ಉಸ್ತುವಾರಿ ಸಚಿವರಾಗಿರುವ ಕೆ.ಎನ್. ರಾಜಣ್ಣ ಅವರು ಭಾನುವಾರ ಶಕ್ತಿ ಯೋಜನೆಗೆ ಚಾಲನೆ ನೀಡಲು ತುಮಕೂರಿನಿಂದ ಕುಣಿಗಲ್ ಮಾರ್ಗವಾಗಿ ಹಾಸನಕ್ಕೆ ತೆರಳುತ್ತಿದ್ದರು.

ಈ ಬಗ್ಗೆ ವಿಷಯ ತಿಳಿದ ಕೆಎನ್ ಆರ್ ಅಭಿಮಾನಿಗಳು, ಹಿತೈಷಿಗಳು, ಕಾಂಗ್ರೆಸ್ ಕಾರ್ಯಕರ್ತರು ಕುಣಿಗಲ್ ಪಟ್ಟಣದ ಹುಚ್ಚಮಾಸ್ತಿಗೌಡ ಸರ್ಕಲ್ ಬಳಿ ಕಾರನ್ನು ತಡೆದು ಪುಪ್ಪ ಮಾಲೆ‌ಹಾಕಿ ಅಭಿನಂದಿಸಿ, ಬಳಿಕ ಸಮೀಪದಲ್ಲೇ ಪಟಾಕಿ ಹಚ್ಚಿ ಸಿಡಿಸಿದರು. ಈ ಸಂದರ್ಭ ಸಚಿವ ರಾಜಣ್ಣ ಧರಿಸಿದ ಕನ್ನಡಕ ತೆಗೆಯುವುದು ಹಾಗೂ ಪಟಾಕಿ ಸಿಡಿಯುವುದು ಒಂದೇ ಸಮಯವಾಗಿತ್ತು. ಪಟಾಕಿಯ ಕಿಡಿ ನೇರವಾಗಿ ಬಲ ಕಣ್ಣಿಗೆ ಬಂದು ಸಿಡಿಯಿತು. ತಕ್ಷದ ಇಲ್ಲಿನ ಖಾಸಗಿ ಆಸ್ಪತ್ರೆಯೊಂದಕ್ಕೆ ತೆರಳಿ ನೇತ್ರ ತಜ್ಞ ಡಾ.ರವಿಕುಮಾರ್ ಅವರಿಂದ ಚಿಕಿತ್ಸೆ ಪಡೆದು, ಬಳಿಕ ಹಾಸನಕ್ಕೆ ತೆರಳಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು