News Karnataka Kannada
Saturday, May 11 2024
ಗುಜರಾತ್

ಅಹಮದಾಬಾದ್‌: ಬಟ್ಟೆ ಕೊಡಿಸಿ ಎಂದು ಹಿಂಸಿಸುತ್ತಿದ್ದ ಪತ್ನಿಯನ್ನು ಹೊರಗಟ್ಟಿದ ಪತಿ

Police
Photo Credit :

ಅಹಮದಾಬಾದ್‌ : ಗಂಡ-ಹೆಂಡತಿ ಎಂದರೆ ನೂರಾರು ಅಸಮಾಧಾನಗಳು ಇದ್ದೇ ಇರುತ್ತವೆ. ಮಾಡುವ ನೂರಾರು ಕೆಲಸಗಳಲ್ಲಿ ಭಿನ್ನಾಭಿಪ್ರಾಯಗಳಿರುತ್ತವೆ. ಎಲ್ಲರ ಮನೆಯಲ್ಲೂ ಇದೇ ರೀತಿಯ ಮನಸ್ತಾಪಗಳ ಕಾರಣ ನಿತ್ಯ ಜಗಳ ಇರುತ್ತದೆ. ಅಹಮದಾಬಾದ್‌ನಲ್ಲಿ 38 ವರ್ಷದ ಮಹಿಳೆಯ ಕತೆ ಸ್ವಲ್ಪ ಭಿನ್ನ. ಯಾವಾಗಲೂ ಹೊಸ ಬಟ್ಟೆ ಕೊಡಿಸಿ ಎಂದು ಗಂಡನನ್ನು ಗೋಗರೆದು ಹಿಂಸಿಸುತ್ತಿದ್ದ ಪತ್ನಿಯನ್ನು ಪತಿರಾಯ ದೂರ ತಳ್ಳಿದ್ದಾನೆ. ಆಕೆ ಸೀದಾ ಪೊಲೀಸ್‌ ಠಾಣೆಗೆ ತೆರಳಿ ದೂರು ದಾಖಲಿಸಿದ್ದಾಳೆ.

ಅದಲ್ಲದೇ ಗಂಡ ಮತ್ತು ಅವರ ಕುಟುಂಬಸ್ಥರು ವರದಕ್ಷಿಣೆಗಾಗಿ ಪೀಡಿಸುತ್ತಿದ್ದಾರೆ ಎಂದು ಕೂಡ ದೂರಿನಲ್ಲಿ ಆರೋಪಿಸಿದ್ದಾಳೆ.

ನನಗೆ ಹಳೆಯ ಬಟ್ಟೆಗಳು ಧರಿಸಲು ಆಗುತ್ತಿರಲಿಲ್ಲ. ಹಾಗಾಗಿ ಹೊಸ ಬಟ್ಟೆ ಕೊಡಿಸಲು ಗಂಡನಿಗೆ ಕೇಳಿದೆ. ಅಷ್ಟಕ್ಕೇ ಸಿಟ್ಟು ಮಾಡಿಕೊಂಡು ಗಂಡ ದೂರವಾಗಿದ್ದಾರೆ ಎಂದು ದೂರಿನಲ್ಲಿ ವಿವರಿಸಿದ್ದಾಳೆ. ಪಟಾನ್‌ ಮೂಲದ ಗಂಡನ ಜತೆಗೆ ಘಾಟ್ಲೊಡಿಯಾದಲ್ಲಿ ಮಹಿಳೆ ವಾಸವಿದ್ದಳು ಎಂದು ತಿಳಿದುಬಂದಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12790
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು