News Karnataka Kannada
Monday, May 06 2024
ಗುಜರಾತ್

ಗುಜರಾತ್‌:ಯುವಕನ ಹತ್ಯೆ ಸಂಬಂಧಿಸಿ ಮೌಲ್ವಿ ಸೇರಿ ಮೂವರು ಆರೋಪಿಗಳ ಬಂಧನ

Arrest
Photo Credit :

ಅಹಮದಾಬಾದ್‌: ಅಹಮದಾಬಾದ್‌ ಪೊಲೀಸರು ಯುವಕನ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ  ಮೌಲ್ವಿ ಮೊಹಮ್ಮದ್ ಅಯೂಬ್‌ ವೈ. ಜಬರವಾಲಾ (51) ಎಂಬುವವರನ್ನು ಶುಕ್ರವಾರ ಬಂಧಿಸಿದ್ದಾರೆ.

ಆರೋಪಿಗಳಾದ ಶಬ್ಬೀರ್‌ ಚೋಪ್ಡಾ ಅಲಿಯಾಸ್ ಸಬಾ ದಾದಾಭಾಯ್ (25) ಹಾಗೂ ಇಮ್ತಿಯಾಜ್‌ ಪಠಾಣ್‌ (27) ಎಂಬುವವರನ್ನು ಪೊಲೀಸರು ಈಗಾಗಲೇ ಬಂಧಿಸಿದ್ದಾರೆ.

ಜಬರವಾಲಾ ಬಂಧನದೊಂದಿಗೆ, ಪ್ರಕರಣಕ್ಕೆ ಸಂಬಂಧಿಸಿ ಬಂಧಿತರ ಸಂಖ್ಯೆ ಮೂರಕ್ಕೇರಿದಂತಾಗಿದೆ.ಈ ಇಬ್ಬರು ಆರೋಪಿಗಳಿಗೆ ಪಿಸ್ತೂಲ್‌ ಹಾಗೂ ಕಾರ್ಟ್ರಿಜ್‌ಗಳನ್ನು ಪೂರೈಕೆ ಮಾಡಿದ ಆರೋಪ ಜಬರವಾಲಾ ವಿರುದ್ಧ ಇದೆ.

ಅನ್ಯ ಧರ್ಮ ಕುರಿತ ಆಕ್ಷೇಪಾರ್ಹ ಪೋಸ್ಟ್‌ವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದ ಎಂಬ ಕಾರಣಕ್ಕೆ 30 ವರ್ಷದ ಕಿಶನ್‌ ಬೊಲಿಯಾ ಎಂಬಾತನನ್ನು ಜ. 25ರಂದು ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12795
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು