ಕೀವ್ : ಬಾಂಗ್ಲಾದೇಶದ ಹಡಗು ರಷ್ಯಾ ಕ್ಷಿಪಣಿ ದಾಳಿಯಲ್ಲಿ ನಾಶವಾಗಿದೆ ಎಂದು ಉಕ್ರೇನ್ ಮಾಹಿತಿ ನೀಡಿದೆ.ರಷ್ಯಾ ಕ್ಷಿಪಣಿ ದಾಳಿಯಲ್ಲಿ ಬಾಂಗ್ಲಾದೇಶದ ಹಡಗು ನಾಶವಾಗಿದೆ.ಈ ಬಗ್ಗೆ ಉಕ್ರೇನ್ ಮಾಹಿತಿ ನೀಡಿದೆ. ಉಕ್ರೇನ್ ಬಂದರಿನಲ್ಲಿ ನಿಂತಿದ್ದ ಬಾಂಗ್ಲಾದ ಹಡಗು ಧ್ವಂಸವಾಗಿದೆ. ಬಾಂಗ್ಲಾದ ಹಡಗಿನಲ್ಲಿದ್ದ ಓರ್ವ ಸಿಬ್ಬಂದಿ ಸಾವನ್ನಪ್ಪಿದ್ದಾರೆ ಎಂದು ಉಕ್ರೇನ್ ತಿಳಿಸಿದೆ.
ಇನ್ನು ಕಳೆದೊಂದು ವಾರದಲ್ಲಿ ರಷ್ಯಾದ ಆಕ್ರಮಣ ಪ್ರಾರಂಭವಾದಾಗಿನಿಂದ ಕನಿಷ್ಠ ಒಂದು ಮಿಲಿಯನ್ ಉಕ್ರೇನಿಯನ್ನರು ದೇಶದಿಂದ ಪಲಾಯನ ಮಾಡಿದ್ದಾರೆ ಎಂದು ವಿಶ್ವಸಂಸ್ಥೆಯ ನಿರಾಶ್ರಿತರ ಆಯುಕ್ತ ಫಿಲಿಪ್ಪೊ ಗ್ರಾಂಡಿ ಹೇಳಿದ್ದಾರೆ.