News Karnataka Kannada
Sunday, May 12 2024
ಗುಜರಾತ್

ನಾಯಿಯ ಹುಟ್ಟುಹಬ್ಬದ ಆಚರಿಸಿದ ಆರೋಪದ ಹಿನ್ನೆಲೆ ಮೂವರು ಸಹೋದರರ ಬಂಧನ

Arrest 22082021
Photo Credit :

ಅಹಮದಾಬಾದ್ : ದೇಶದಲ್ಲಿ ಕೊರೊನಾ ಸಾಂಕ್ರಾಮಿಕ ರೋಗ ಹೆಚ್ಚುತ್ತಿದೆ. ಈ ಹಿನ್ನೆಲೆಯಲ್ಲಿ ಕಟ್ಟುನಿಟ್ಟಿನ ಕ್ರಮಗಳನ್ನು ಜಾರಿ ಮಾಡಲಾಗುತ್ತಿದೆ. ಸಾಂಕ್ರಾಮಿಕ ಮಾರ್ಗಸೂಚಿಗಳನ್ನು ಉಲ್ಲಂಘಿಸಿ ತಮ್ಮ ಸಾಕು ನಾಯಿಯ ಹುಟ್ಟುಹಬ್ಬದ ಆಚರಿಸಿದ ಆರೋಪದ ಹಿನ್ನೆಲೆಯಲ್ಲಿ ಮೂವರು ಸಹೋದರನ್ನು ಪೊಲೀಸರು ಬಂಧಿಸಿದ ಘಟನೆ ಗುಜರಾತ್‌ನ ಅಹಮದಾಬಾದ್‌ನಲ್ಲಿ ನಡೆದಿದೆ.

ಅಹಮದಾಬಾದ್ ನ ಕೃಷ್ಣನಗರದ ನಿವಾಸಿಗಳಾದ ಚಿರಾಗ್ ಪಟೇಲ್ ಮತ್ತು ಅವರ ಸಹೋದರ ಉರ್ವೀಶ್ ಪಟೇಲ್, ತಮ್ಮ ಸ್ನೇಹಿತ ದಿವ್ಯೇಶ್ ಮೆಹಾರಿಯಾ ಅವರೊಂದಿಗೆ ಭಾರತೀಯ ಸ್ಪಿಟ್ಜ್ ಅಬ್ಬಿ ಅವರ ಸಾಕು ನಾಯಿಯ ಹುಟ್ಟುಹಬ್ಬದ ಆಚರಣೆಯನ್ನು ಮಾಡಿದ್ದಾರೆ. ಇದಕ್ಕೆ ಹಲವರನ್ನು ಆಹ್ವಾನಿಸಿ ಭರ್ಜರಿ ಪಾರ್ಟಿಯನ್ನೂ ಆಯೋಜಿಸಿದ್ದಾರೆ. ಅಪಾರ್ಟ್‌ಮೆಂಟ್‌ನಲ್ಲಿ ತಮ್ಮ ಸ್ನೇಹಿತರ ಜೊತೆಗೆ ಪಾರ್ಟಿ ಮಾಡುವ ವೇಳೆಯಲ್ಲಿ ಕೊರೊನಾ ನಿಯಮಗಳನ್ನು ಗಾಳಿಗೆ ತೂರಲಾಗಿದೆ ಅನ್ನೋ ಆರೋಪ ಕೇಳಿಬಂದಿತ್ತು.

ಇಷ್ಟೇ ಅಲ್ಲಾ ನಾಯಿಯ ಹುಟ್ಟುಹಬ್ಬದ ಸಂಭ್ರಮಾಚರಣೆಯಲ್ಲಿ ಜನಪ್ರಿಯ ಜಾನಪದ ಗಾಯಕರೊಬ್ಬರು ಪ್ರದರ್ಶನ ನೀಡಿದ್ದು, ಕೇಕ್‌ ಕತ್ತರಿಸಿ ಸಂಭ್ರಮಿಸಲಾಗಿದೆ. ಈ ಹಿನ್ನೆಲೆಯಲ್ಲಿ ಭಾರತೀಯ ದಂಡ ಸಂಹಿತೆ ಮತ್ತು ಸಾಂಕ್ರಾಮಿಕ ರೋಗಗಳ ಕಾಯ್ದೆಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ನಿಕೋಲ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದ್ದು, ಚಿರಾಗ್ ಪಟೇಲ್, ಉರ್ವೀಶ್ ಪಟೇಲ್ ಮತ್ತು ದಿವ್ಯೇಶ್ ಮೆಹಾರಿಯಾ ಅವರನ್ನು ಬಂಧಿಸಲಾಗಿದೆ ಎಂದು ಗುಜರಾತ್‌ ಮಾಧ್ಯಮಗಳು ವರದಿ ಮಾಡಿವೆ.

ಗುಜರಾತ್‌ನಲ್ಲಿ ಕೊರೊನಾ ಸೋಂಕ್ರೀಯ ಪ್ರಕರಣ ಸಂಖ್ಯೆ ಹೆಚ್ಚುತ್ತಿದೆ. ಆರೋಗ್ಯ ಇಲಾಖೆ ನೀಡಿರುವ ಮಾಹಿತಿಯ ಪ್ರಕಾರ ಅಹಮದಾಬಾದ್ ನಗರದಲ್ಲಿ 8,700 ಸಕ್ರಿಯ ಪ್ರಕರಣಗಳಿವೆ. ಕೊರೊನಾ ನಿಯಂತ್ರಣಕ್ಕೆ ಈಗಾಗಲೇ ಗುಜರಾತ್‌ ಸರಕಾರ ನೈಟ್‌ ಕರ್ಪ್ಯೂ ವಿಸ್ತರಣೆ ಮಾಡಿ ಆದೇಶ ಹೊರಡಿಸಿದೆ. ಅಲ್ಲದೇ ರಾಜಕೀಯ, ಸಾಮಾಜಿಕ ಕಾರ್ಯಕ್ರಮ ಆಯೋಜನೆಗೆ ನಿರ್ಬಂಧ ಹೇರಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು