News Karnataka Kannada
Friday, May 17 2024
ದೆಹಲಿ

ವಿಸ್ತಾರಾ ಏರ್‌ಲೈನ್ಸ್‌ಗೆ ಪೈಲಟ್‌ಗಳ ಕೊರತೆಯಿಂದ 70 ವಿಮಾನಗಳ ಸೇವೆ ರದ್ದು

ಟಾಟಾ ಕಂಪನಿ ಒಡೆತನದ ವಿಸ್ತಾರಾ ಏರ್‌ಲೈನ್ಸ್‌ಗೆ ಪೈಲಟ್‌ಗಳ ಕೊರತೆಯಿಂದಾಗಿ ಇಂದು ಕಂಪನಿಯ ಸುಮಾರು 70 ವಿಮಾನಗಳ ಸೇವೆ ರದ್ದಾಗಿದೆ ಎಂಬ ಮಾಹಿತಿ ತಿಳಿದು ಬಂದಿದೆ
Photo Credit : NewsKarnataka

ನವದೆಹಲಿ: ಟಾಟಾ ಕಂಪನಿ ಒಡೆತನದ ವಿಸ್ತಾರಾ ಏರ್‌ಲೈನ್ಸ್‌ಗೆ ಪೈಲಟ್‌ಗಳ ಕೊರತೆಯಿಂದಾಗಿ ಇಂದು ಕಂಪನಿಯ ಸುಮಾರು 70 ವಿಮಾನಗಳ ಸೇವೆ ರದ್ದಾಗಿದೆ ಎಂಬ ಮಾಹಿತಿ ತಿಳಿದು ಬಂದಿದೆ.

ಕಳೆದ ಒಂದು ವಾರದಿಂದ ಇದೇ ಕಾರಣದಿಂದ ವಿಸ್ತಾರಾದ 100ಕ್ಕೂ ಹೆಚ್ಚು ವಿಮಾನಗಳ ಸೇವೆಯಲ್ಲಿ ವ್ಯತ್ಯಯವಾಗಿದೆ.ಈ ಬಗ್ಗೆ ನಾಗರಿಕ ವಿಮಾನಯಾನ ಸಚಿವಾಲಯವು ಡಿಜಿಸಿಎದಿಂದ ವರದಿ ಕೇಳಿದೆ.

ವಿಸ್ತಾರ ಟಾಟಾ ಗ್ರೂಪ್ ಸೇರಿದ ನಂತರ ಅದರ ಪೈಲಟ್‌ಗಳು ಸಂಬಳ ಸೇರಿದಂತೆ ಇತರೆ ಅನುಕೂಲಗಳಿಗೆ ಆಗ್ರಹಿಸಿ ಅಘೋಷಿತ ಪ್ರತಿಭಟನೆ ನಡೆಸುತ್ತಿದ್ದಾರೆ. ಅನೇಕರು ಅನಾರೋಗ್ಯದ ನೆಪ ಒಡ್ಡಿ ಕೆಲಸಕ್ಕೆ ರಜೆ ಹಾಕಿದ್ದಾರೆ. ಇದರಿಂದ ವಿಸ್ತಾರ ಏರ್‌ಲೈನ್ಸ್ ಸೇವೆಯಲ್ಲಿ ಸಾಕಷ್ಟು ವ್ಯತ್ಯಯವಾಗಿದೆ. ಸೇವೆಯ ವ್ಯತ್ಯಯದ ಬಗ್ಗೆ ವಿಸ್ತಾರಾ ಅಧಿಕೃತ ಹೇಳಿಕೆ ಬಿಡುಗಡೆ ಮಾಡಿಲ್ಲ. ಈ ಸಂಸ್ಥೆಯು 300 ವಿಮಾನಗಳನ್ನು ನಿರ್ವಹಿಸುತ್ತಿದೆ ಎಂಬ ಮಾಹಿತಿ ಮೂಲಗಳಿಂದ ತಿಳಿದು ಬಂದಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು