News Karnataka Kannada
Thursday, May 02 2024
ಕ್ರೀಡೆ

ಮುಂಬೈ ಇಂಡಿಯನ್ಸ್​ಗೆ ಮತ್ತೆ ರೋಹಿತ್​ ಶರ್ಮಾ ಕ್ಯಾಪ್ಟನ್​​

Rs
Photo Credit : NewsKarnataka

ಮುಂಬೈ: ತಂಡಕ್ಕೆ ಐದು ಬಾರಿ ಟ್ರೋಫಿ ಗೆದ್ದುಕೊಟ್ಟ ನಾಯಕ ರೋಹಿತ್‌ ಶರ್ಮಾ ಅವರನ್ನು ಕ್ಯಾಪ್ಟನ್‌ ಪಟ್ಟದಿಂದ ಕೆಳಗಿಳಿಸಿದ ಮುಂಬೈ ಇಂಡಿಯನ್ಸ್‌ ಫ್ರಾಂಚೈಸಿ ಆಲ್‌ರೌಂಡರ್‌ ಹಾರ್ದಿಕ್‌ ಪಾಂಡ್ಯ ಅವರಿಗೆ ನಾಯಕತ್ವ ನೀಡಿತು. ಈಗ ಹಾರ್ದಿಕ್​ ಪಾಂಡ್ಯ ನೇತೃತ್ವದಲ್ಲಿ ಮುಂಬೈ ಇಂಡಿಯನ್ಸ್​​ ಸತತ ಮೂರು ಪಂದ್ಯಗಳನ್ನು ಸೋತಿದೆ.

ಹೌದು, 2024ರ ಐಪಿಎಲ್​​ನಲ್ಲಿ ಇನ್ನೂ ಒಂದು ಪಂದ್ಯವೂ ಮುಂಬೈ ಇಂಡಿಯನ್ಸ್​​ ಗೆದ್ದಿಲ್ಲ. ಗುಜರಾತ್ ಟೈಟನ್ಸ್, ಸನ್‌ರೈಸರ್ಸ್ ಹೈದರಾಬಾದ್ ಮತ್ತು ರಾಜಸ್ಥಾನ್ ರಾಯಲ್ಸ್ ವಿರುದ್ಧ ಸೋಲು ಅನುಭವಿಸಿದೆ. ಈ ಮಧ್ಯೆ ಹಾರ್ದಿಕ್​ ಜಾಗಕ್ಕೆ ಮತ್ತೆ ರೋಹಿತ್​ ಶರ್ಮಾ ಅವರೇ ಕ್ಯಾಪ್ಟನ್​ ಆಗಿ ಬರಬಹುದು ಎಂದು ಟೀಮ್​ ಇಂಡಿಯಾದ ಮಾಜಿ ಕ್ಯಾಪ್ಟನ್​​ ಮನೋಜ್ ತಿವಾರಿ ಅಭಿಪ್ರಾಯಪಟ್ಟಿದ್ದಾರೆ.

ಈ ಸಂಬಂಧ ಮಾತಾಡಿದ ಮನೋಜ್​ ತಿವಾರಿ, 2024ರ ಆವೃತ್ತಿಯಲ್ಲಿ ಮುಂಬೈ ಕಳಪೆ ಆರಂಭ ಪಡೆದುಕೊಂಡಿದೆ. ಹಾಗಾಗಿ ರೋಹಿತ್ ಶರ್ಮಾ ಅವರನ್ನು ಮತ್ತೊಮ್ಮೆ ಮುಂಬೈ ಇಂಡಿಯನ್ಸ್ ತಂಡದ ನಾಯಕನನ್ನಾಗಿ ಮಾಡಬಹುದು. ಮುಂಬೈ ಇಂಡಿಯನ್ಸ್ ಫ್ರಾಂಚೈಸಿ ಮಾಲೀಕರು ನಿರ್ಧಾರ ತೆಗೆದುಕೊಳ್ಳಲು ಹಿಂದೇಟು ಹಾಕುವುದಿಲ್ಲ. ನಾಯಕನನ್ನು ಬದಲಾಯಿಸುವುದು ದೊಡ್ಡ ನಿರ್ಧಾರ ಎಂದರು.

 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು