ನವದೆಹಲಿ: ವಿಶ್ವದ ಮೊದಲ ಎಐ ಸಾಫ್ಟವೇರ್ ಇಂಜಿನಿಯರ್ ನನ್ನು ಇದೀಗ ಕಾಗ್ನಿಷಿಯನ್ ಕಂಪನಿ ಸೃಷ್ಟಿಸಿದೆ.ಎಐ ಸಾಫ್ಟ್ ವೇರ್ ಇಂಜಿನಿಯರ್ ಕೋಡಿಂಗ್ ಮಾಡಲು, ವೆಬ್ ಸೈಟ್ ಹಾಗೂ ಸಾಫ್ಟ್ ವೇರ್ ಸೃಷ್ಟಿಸಲು ಸಮರ್ಥವಾಗಿದೆ. ಇದನ್ನು ಮಾನವ ಇಂಜಿನಿಯರ್ ಗಳ ಜೊತೆಗೆ ಕೆಲಸ ಮಾಡುವ ಉದ್ದೇಶದಿಂದ ಸೃಷ್ಟಿಸಲಾಗಿದೆ. ಹಾಗೂ ಇದರ ಹೆಸರು ಡೆವಿನ್ ಎಂದು ಇಡಲಾಗಿದೆ.
ಇದರ ಅನ್ವೇಷಣೆ ಹಲವರ ಉದ್ಯೋಗಕ್ಕೆ ಕುತ್ತು ತರಲಿದೆ ಎಂದು ಆರೋಪ ಕೇಳಿ ಬಂದ ಬೆನ್ನಲ್ಲೆ, ಕಾಗ್ನಿಷಿಯನ್ ಸ್ಪಷ್ಟನೆ ನೀಡಿದೆ. ಅದೇನೆಂದರೆ ಮಾನವ ಇಂಜಿನಿಯರ್ ಗಳ ಸ್ಥಾನವನ್ನು ಆಕ್ರಮಿಸುವ ಉದ್ದೇಶದಿಂದ ಡೆವಿನ್ ಅನ್ನು ಸೃಷ್ಟಿಸಿಲ್ಲ. ಬದಲಿಗೆ ಇದು ಮಾನವ ಇಂಜಿನಿಯರ್ ಗಳ ಜೊತೆ ಜೊತೆಗೆ ಕಾರ್ಯನಿರ್ವಹಿಸಲಿದೆ ಎಂಬ ಮಾಹಿತಿಯನ್ನು ನೀಡಿದೆ. ಈ ಇಂಜಿನ್ ಅನ್ನು ಮಾನವರ ಕೆಲಸವನ್ನು ಸುಲಭಗೊಳಿಸುವ ಉದ್ದೇಶದಿಂದ ಸೃಷ್ಟಿಸಲಾಗಿದೆ ಎಂದು ಈ ಸಂಸ್ಥೆ ತಿಳಿಸಿದೆ.
‘ಇಂದು ನಾವು ಮೊದಲ ಸಾಫ್ಟ್ ವೇರ್ ಇಂಜಿನಿಯರ್ ಡೆವಿನ್ ಅನ್ನು ಪರಿಚಯಿಸಲು ಸಂತಸಪಡುತ್ತೇವೆ. ಅಗಗ್ರಣ್ಯ ಎಐ ಕಂಪನಿಗಳಿಂದ ಪ್ರಾಯೋಗಿಕ ಇಂಜಿನಿಯರಿಂಗ್ ಪರೀಕ್ಷೆಗಳಲ್ಲಿ ಡೆವಿನ್ ತೇರ್ಗಡೆ ಹೊಂದಿದೆ. ಅಲ್ಲದೆ, ಇದು ಅಪ್ ವರ್ಕ್ ನಲ್ಲಿ ಕೆಲಸ ಕೂಡ ನಿರ್ವಹಿಸಿದೆ. ಡೆವಿನ್ ಅಟೋನಮಸ್ ಏಜೆಂಟ್ ಆಗಿದ್ದು, ಇಂಜಿನಿಯರಿಂಗ್ ಕೆಲಸಗಳನ್ನು ತನ್ನ ಸ್ವಂತ ಶೆಲ್, ಕೋಡ್ ಎಡಿಟರ್ ಹಾಗೂ ವೆಬ್ ಬ್ರೌಸರ್ ಮೂಲಕ ಮಾಡುತ್ತದೆ’ ಎಂದು ಕಾಗ್ನಿಷಿಯನ್ ‘ಎಕ್ಸ್’ ನಲ್ಲಿ ಪೋಸ್ಟ್ ಹಾಕಿದೆ.
Today we're excited to introduce Devin, the first AI software engineer.
Devin is the new state-of-the-art on the SWE-Bench coding benchmark, has successfully passed practical engineering interviews from leading AI companies, and has even completed real jobs on Upwork.
Devin is… pic.twitter.com/ladBicxEat
— Cognition (@cognition_labs) March 12, 2024