News Karnataka Kannada
Saturday, May 11 2024
ದೆಹಲಿ

ರದ್ದುಗೊಂಡ ವೈಟಿಂಗ್‌ ಲಿಸ್ಟ್‌ ಟಿಕೆಟ್‌: 3 ವರ್ಷಗಳಲ್ಲಿ ಭರ್ಜರಿ ಆದಾಯ ಗಳಿಸಿದ ಭಾರತೀಯ ರೈಲ್ವೆ

ರದ್ದುಗೊಂಡ ವೈಟಿಂಗ್‌ ಲಿಸ್ಟ್‌ ಟಿಕೆಟ್‌ಗಳಿಂದ ಭಾರತೀಯ ರೈಲ್ವೆಯು 2021 ಹಾಗೂ 2024(ಜನವರಿ) ನಡುವೆ ರೂ 1,229.85 ಕೋಟಿ ಗಳಿಸಿದೆ ಎಂದು ಆರ್‌ಟಿಐ ಮಾಹಿತಿಯಿಂದ ತಿಳಿದು ಬಂದಿದೆ. ಮಧ್ಯಪ್ರದೇಶ ಮೂಲದ ಆರ್‌ಟಿಐ ಕಾರ್ಯಕರ್ತ ವಿವೇಕ್‌ ಪಾಂಡೆ ಈ ಮಾಹಿತಿ ಕೋರಿ ರೈಲ್ವೆ ಸಚಿವಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.
Photo Credit : NewsKarnataka

ಹೊಸದಿಲ್ಲಿ: ರದ್ದುಗೊಂಡ ವೈಟಿಂಗ್‌ ಲಿಸ್ಟ್‌ ಟಿಕೆಟ್‌ಗಳಿಂದ ಭಾರತೀಯ ರೈಲ್ವೆಯು 2021 ಹಾಗೂ 2024(ಜನವರಿ) ನಡುವೆ ರೂ 1,229.85 ಕೋಟಿ  ಆದಾಯ ಗಳಿಸಿದೆ ಎಂದು ಆರ್‌ಟಿಐ ಮಾಹಿತಿಯಿಂದ ತಿಳಿದು ಬಂದಿದೆ. ಮಧ್ಯಪ್ರದೇಶ ಮೂಲದ ಆರ್‌ಟಿಐ ಕಾರ್ಯಕರ್ತ ವಿವೇಕ್‌ ಪಾಂಡೆ ಈ ಮಾಹಿತಿ ಕೋರಿ ರೈಲ್ವೆ ಸಚಿವಾಲಯಕ್ಕೆ ಅರ್ಜಿಯನ್ನು  ಸಲ್ಲಿಸಿದ್ದರು.

ರದ್ದುಗೊಂಡ ವೈಟಿಂಗ್‌ ಲಿಸ್ಟ್‌ ಟಿಕೆಟ್‌ಗಳಿಂದ ರೈಲ್ವೆಯ ಗಳಿಕೆ ವರ್ಷದಿಂದ ವರ್ಷಕ್ಕೆ ಏರಿಕೆಯಾಗಿದೆ. 2021 ರಲ್ಲಿ 2.53 ಕೋಟಿ ವೈಟಿಂಗ್‌ ಲಿಸ್ಟ್‌ ಟಿಕೆಟ್‌ಗಳು ರದ್ದುಗೊಂಡು ರೈಲ್ವೆ ರೂ. 242.68 ಕೋಟಿ ಗಳಿಸಿದ್ದರೆ, 2022ರಲ್ಲಿ 4.6 ಕೋಟಿ ಟಿಕೆಟ್‌ಗಳು ರದ್ದುಗೊಂಡು ರೈಲ್ವೆ ರೂ. 439.16 ಕೋಟಿ ಗಳಿಸಿತ್ತು. 2023ರಲ್ಲಿ 5.26 ಕೋಟಿ ಟಿಕೆಟ್‌ ರದ್ದುಗೊಂಡು ರೈಲ್ವೆ ರೂ. 505 ಕೋಟಿ ಗಳಿಸಿದ್ದರೆ ಈ ವರ್ಷದ ಜನವರಿಯಲ್ಲಿ 45.86 ಲಕ್ಷ ಟಿಕೆಟ್‌ಗಳು ರದ್ದುಗೊಂಡು ರೈಲ್ವೆ ರೂ. 43 ಕೋಟಿ ಗಳಿಸಿತ್ತು ಎಂದು ಆರ್‌ಟಿಐ ಮಾಹಿತಿಯಿಂದ ತಿಳಿದು ಬಂದಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು