News Karnataka Kannada
Saturday, April 20 2024
Cricket
ದೆಹಲಿ

ಲಿಕ್ಕರ್‌ ಲೈಸೆನ್ಸ್‌ ಪ್ರಕರಣಕ್ಕೆ ಹೊಸ ತಿರುವು : ಕೊನೆಗೂ ಆಪ್ ಸಂಸದನಿಗೆ ಸಿಕ್ತು ರಿಲೀಫ್‌

100 ಕೋಟಿ ಲಿಕ್ಕರ್‌ ಲೈಸೆನ್ಸ್‌ ಪ್ರಕರಣಕ್ಕೆ ಇದೀಗ ಹೊಸ ತಿರುವು ಸಿಕ್ಕಿದೆ.ಈ ಹಗರಣದ ಆರೋಪದಲ್ಲಿ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರು ತಿಹಾರ್ ಜೈಲಿನಲ್ಲಿ ನಿನ್ನೆ ಒಂದು ರಾತ್ರಿಯನ್ನ ಕಳೆದಿದ್ದಾರೆ.
Photo Credit : NewsKarnataka

ನವದೆಹಲಿ :   100 ಕೋಟಿ ಲಿಕ್ಕರ್‌ ಲೈಸೆನ್ಸ್‌ ಪ್ರಕರಣಕ್ಕೆ ಇದೀಗ ಹೊಸ ತಿರುವು ಸಿಕ್ಕಿದೆ.ಈ ಹಗರಣದ ಆರೋಪದಲ್ಲಿ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರು ತಿಹಾರ್ ಜೈಲಿನಲ್ಲಿ ನಿನ್ನೆ ಒಂದು ರಾತ್ರಿಯನ್ನ ಕಳೆದಿದ್ದಾರೆ. ಇತ್ತ ಈ ವಿಚಾರವಾಗಿ ಜೈಲು ಪಾಲಾಗಿದ್ದಆಮ್ ಆದ್ಮಿ ಪಕ್ಷದ ಸಂಸದನಿಗೆ ಸುಪ್ರೀಂಕೋರ್ಟ್ ಜಾಮೀನು ಮಂಜೂರು ಮಾಡಿದೆ.

ರಾಜ್ಯಸಭಾ ಸದಸ್ಯ ಸಂಜಯ್ ಸಿಂಗ್ ಅವರು ಕಳೆದ ಅಕ್ಟೋಬರ್‌ನಲ್ಲಿ ದೆಹಲಿ ಅಬಕಾರಿ ನೀತಿ ಹಗರಣ ಸಂಬಂಧ ಬಂಧಿಸಲಾಗಿತ್ತು. ಸಂಜಯ್ ಸಿಂಗ್ ಅವರ ಬಂಧನದ ವೇಳೆ ಯಾವುದೇ ಲಂಚದ ಹಣ ಸಿಕ್ಕಿರಲಿಲ್ಲ. ಸಂಜಯ್ ಸಿಂಗ್ ಅವರ ಜಾಮೀನಿಗೆ ED ಅಧಿಕಾರಿಗಳು ಯಾವುದೇ ಆಕ್ಷೇಪ ವ್ಯಕ್ತಪಡಿಸಿಲ್ಲ. ಹೀಗಾಗಿ ಸುಪ್ರೀಂಕೋರ್ಟ್ 6 ತಿಂಗಳ ಬಳಿಕ ಸಂಜಯ್ ಸಿಂಗ್ ಅವರಿಗೆ ಜಾಮೀನು ಕರುಣಿಸಿದೆ.

ಇತ್ತೀಚೆಗೆ ನಡೆದ ರಾಜ್ಯಸಭಾ ಚುನಾವಣೆಯಲ್ಲಿ ಮರು ಆಯ್ಕೆಯಾಗಿದ್ದ ಸಂಜಯ್ ಸಿಂಗ್ ತಿಹಾರ್‌ ಜೈಲಿನಿಂದ ಬಂದು ಬಂದು ರಾಜ್ಯಸಭಾ ಸದಸ್ಯರಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
53230
Newskarnataka

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು