News Karnataka Kannada
Friday, May 03 2024
ದೆಹಲಿ

20 ವಿವಿಗಳನ್ನು ನಕಲಿ ಎಂದು ಘೋಷಿಸಿದ ಯುಜಿಸಿ: ಕರ್ನಾಟಕದಲ್ಲಿಯೂ ಇದೆ

universities fake
Photo Credit : News Kannada

ದೆಹಲಿ: ವಿಶ್ವವಿದ್ಯಾಲಯ ಅನುದಾನ ಆಯೋಗ ದೇಶದ 20 ವಿಶ್ವವಿದ್ಯಾಲಯಗಳನ್ನು ನಕಲಿ ಎಂದು ಘೋಷಿಸಿದೆ. ನಕಲಿ ಎಂದು ಘೋಷಿಸಿದ ವಿಶ್ವವಿದ್ಯಾಲಯಗಳಿಗೆ ಪದವಿ ನೀಡುವ ಹಕ್ಕು ಇಲ್ಲ ಎಂದು ಯುಜಿಸಿ ತಾಕೀತು ಮಾಡಿದೆ. ಯುಜಿಸಿ ಬಿಡುಗಡೆ ಮಾಡಿರುವ ನಕಲಿ ವಿಶ್ವವಿದ್ಯಾಲಯಗಳ ಪಟ್ಟಿಯಲ್ಲಿ ಎಂಟು ವಿಶ್ವವಿದ್ಯಾಲಯಗಳು ದೆಹಲಿಯಾಗಿವೆ.

ಇದಲ್ಲದೇ ಕರ್ನಾಟಕ, ಮಹಾರಾಷ್ಟ್ರ, ಪುದುಚೇರಿ, ಆಂಧ್ರಪ್ರದೇಶ, ಪಶ್ಚಿಮ ಬಂಗಾಳ, ಕೇರಳ ರಾಜ್ಯಗಳಲ್ಲಿ ನಕಲಿ ವಿಶ್ವವಿದ್ಯಾನಿಲಯಗಳಿದ್ದು, ಯುಜಿಸಿ ವಿಶ್ವವಿದ್ಯಾಲಯಗಳನ್ನು ನಕಲಿ ಎಂದು ಘೋಷಿಸಿ ಹಲವು ಸಂಸ್ಥೆಗಳು ಯುಜಿಸಿ ಕಾಯ್ದೆಯ ನಿಯಮಗಳಿಗೆ ವ್ಯತಿರಿಕ್ತವಾಗಿ ಪದವಿಗಳನ್ನು ನೀಡುತ್ತಿವೆ ಎಂದು ಹೇಳಿದೆ. ಅಂತಹ ವಿಶ್ವವಿದ್ಯಾನಿಲಯಗಳು ನೀಡುವ ಪದವಿಯನ್ನು ಉನ್ನತ ಶಿಕ್ಷಣ ಅಥವಾ ಉದ್ಯೋಗದ ಉದ್ದೇಶಗಳಿಗಾಗಿ ಮಾನ್ಯತೆ ಹೊಂದಿರುವುದಿಲ್ಲ ಎಂದು ಯುಜಿಸಿ ತಿಳಿಸಿದೆ.

ದೇಶದಲ್ಲಿರುವ ನಕಲಿ ವಿಶ್ವವಿದ್ಯಾನಿಲಯಗಳ ಪಟ್ಟಿಯನ್ನು ಬಿಡುಗಡೆ ಮಾಡುವ ಸಂದರ್ಭದಲ್ಲಿ ಯುಜಿಸಿ ಈ ಕುರಿತು ಹೇಳಿಕೆ ನೀಡಿದೆ. ಈ ಅಧಿಸೂಚನೆಯ ಪ್ರಕಾರ, ಕೇಂದ್ರ, ರಾಜ್ಯ/ಪ್ರಾಂತೀಯ ಶಾಸನಗಳ ಅಡಿಯಲ್ಲಿ ಸ್ಥಾಪಿಸಲಾದ ಅಥವಾ ಡೀಮ್ಡ್ ವಿಶ್ವವಿದ್ಯಾಲಯಗಳು ಮಾತ್ರ ಪದವಿಗಳನ್ನು ನೀಡಲು ಅರ್ಹವಾಗಿವೆ. ಅಲ್ಲದೆ, ಸಂಸತ್ತಿನ ಕಾಯಿದೆಯಿಂದ ನಿರ್ದಿಷ್ಟವಾಗಿ ಅಧಿಕಾರ ಪಡೆದ ಸಂಸ್ಥೆಗಳು ವಿದ್ಯಾರ್ಥಿಗಳಿಗೆ ಪದವಿಗಳನ್ನು ನೀಡುತ್ತವೆ ಎಂದು ಯುಜಿಸಿ ಹೇಳಿದೆ.

ಕರ್ನಾಟಕದಲ್ಲಿನ ನಕಲಿ ಘೋಷಿತ ವಿಶ್ವವಿದ್ಯಾಲಯ, “ಬಡಗಾಂವಿ ಸರ್ಕಾರ ವಿಶ್ವ ಮುಕ್ತ ವಿಶ್ವವಿದ್ಯಾಲಯ ಶಿಕ್ಷಣ ಸಂಸ್ಥೆ, ಗೋಕಾಕ, ಬೆಳಗಾವಿ”., ಕೇರಳದಲ್ಲಿನ ಸೇಂಟ್. ಜಾನ್ಸ್ ವಿಶ್ವವಿದ್ಯಾಲಯ, ಕಿಶಾನತ್ತಮ್, ಮಹಾರಾಷ್ಟ್ರದಲ್ಲಿನ ರಾಜಾ ಅರೇಬಿಕ್ ವಿಶ್ವವಿದ್ಯಾಲಯ., ಪುದುಚೇರಿಯಲ್ಲಿನ ಶ್ರೀ ಬೋಧಿ ಅಕಾಡೆಮಿ ಆಫ್ ಹೈಯರ್ ಎಜುಕೇಶನ್, ತಿಲಾಸ್ಪೇಟ್ ನಕಲಿ ವಿಶ್ವವಿದ್ಯಾಲಯ, ದೆಹಲಿಯ ಆಲ್ ಇಂಡಿಯಾ ಇನ್ಸ್ಟಿಟ್ಯೂಟ್ ಆಫ್ ಪಬ್ಲಿಕ್ ಅಂಡ್ ಫಿಸಿಕಲ್ ಹೆಲ್ತ್ ಸೈನ್ಸಸ್., ವಾಣಿಜ್ಯ ವಿಶ್ವವಿದ್ಯಾಲಯ ಲಿಮಿಟೆಡ್, ದರಿಯಾಗಂಜ್., ಯುನೈಟೆಡ್‌ ನೇಷನ್ಸ್‌ ವಿಶ್ವವಿದ್ಯಾಲಯ., ವೆಕೇಷನಲ್‌ ವಿಶ್ವವಿದ್ಯಾಲಯ., ಎಡಿಆರ್‌-ಸೆಂಟ್ರಲ್‌ ಜುರಿಡಿಕಲ್ ವಿಶ್ವವಿದ್ಯಾಲಯ., ಭಾರತೀಯ ವಿಜ್ಞಾನ ಮತ್ತು ಎಂಜಿನಿಯರಿಂಗ್ ಸಂಸ್ಥೆ., ವಿಶ್ವಕರ್ಮ ಸೆಲ್ಫ್‌ ಎಂಪ್ಲಾಯ್‌ಮೆಂಟ್‌ ಒಪನ್‌ ವಿಶ್ವವಿದ್ಯಾಲಯ., ಆಧ್ಯಾತ್ಮಿಕ್‌ ವಿಶ್ವವಿದ್ಯಾಲಯ ಸೇರಿದಂತೆ ಒಟ್ಟು 20 ವಿವಿಗಳು ಎಂದು ಯುಜಿಸಿ ತಿಳಿಸಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು