News Karnataka Kannada
Friday, May 10 2024
ಮಂಗಳೂರು

ಸಿಸಿಟಿವಿ ಡಿವಿಆರ್ ಕಿತ್ತು ಅಂಗಡಿಯಲ್ಲೇ ಬಿಟ್ಟು ಹೋದ ಮರೆಗುಳಿ ಕಳ್ಳ

Thief snatches CCTV DVR, leaves it in shop
Photo Credit : News Kannada

ಉಳ್ಳಾಲ: ತೊಕ್ಕೊಟ್ಟು ಒಳಪೇಟೆ ಮತ್ತು ಜಪ್ಪಿನ ಮೊಗರುವಿನ ವಾಣಿಜ್ಯ ಮಳಿಗೆಗಳಲ್ಲಿ ಸರಣಿ ಕಳ್ಳತನ ನಡೆದಿದ್ದು,ಸಿಸಿಟಿವಿ ಡಿವಿಆರ್ ಅನ್ನು ಕಿತ್ತ ಕಳ್ಳ ಅದನ್ನು ಮರೆತು ಅಂಗಡಿಯಲ್ಲೇ ಬಿಟ್ಟು ಹೋಗಿದ್ದು ಕಳ್ಳನ ಕರಾಮತ್ತಿನ ವೀಡಿಯೋ ಪೊಲೀಸರಿಗೆ ಲಭಿಸಿದೆ.

ತೊಕ್ಕೊಟ್ಟು ಒಳ ಪೇಟೆಯ ಲಕ್ಷ್ಮೀ ಕ್ಯಾಂಟೀನ್ , ಪಕ್ಕದ ಪಾತ್ರೆಯ ಅಂಗಡಿ ಮತ್ತು ಮೊಬೈಲ್ ಅಂಗಡಿಗಳಲ್ಲಿ ಕಳ್ಳತನ ನಡೆದಿದ್ದು ನಗದನ್ನ ದೋಚಲಾಗಿದೆ. ಪಾತ್ರೆಯ ಅಂಗಡಿಗೆ ಕಳ್ಳನೋರ್ವ ಕನ್ನ ಹಾಕುವ ದೃಶ್ಯ ಒಳಗಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಮೇಲ್ಛಾವಣಿಯ ಹೆಂಚು ಸರಿಸಿ ಒಳ ನುಸುಳಿದ ಚಾಣಾಕ್ಷ ಕಳ್ಳ ಮೊದಲಿಗೆ ಸಿಸಿಟಿವಿ ಇರುವುದನ್ನು ಗಮನಿಸಿದ್ದು ವೀಡಿಯೋ ದಾಖಲಾಗುವ ಹಾರ್ಡ್ ಡಿಸ್ಕ್ ಇರುವ ಡಿವಿಆರ್‌ ಅನ್ನೇ  ಮೊದಲಿಗೆ ಕಿತ್ತು ಮೇಜಿನ ಮೇಲಿರಿಸಿದ್ದಾನೆ. ಒಳಗಿದ್ದ ಸುಮಾರು ಐದು ಸಾವಿರ ನಗದನ್ನ ಎಗರಿಸಿದ ನಂತರ ಡಿವಿಆರ್ ಅನ್ನು ಮರೆತು ಅಲ್ಲೇ ಬಿಟ್ಟು ಹೋಗಿದ್ದಾನೆ. ಪಕ್ಕದ ಲಕ್ಷ್ಮೀ ಕ್ಯಾಂಟೀನ್‌ ಗೂ  ಕನ್ನ ಹಾಕಿದ್ದು ಸಿಕ್ಕಿದ 500 ರೂಪಾಯಿ ನಗದನ್ನು ಎಗರಿಸಲಾಗಿದೆ. ಮೊಬೈಲ್ ಅಂಗಡಿಯಲ್ಲಿ ನಗದು ಸಿಗದೆ ಹೆಡ್ ಫೋನ್ ಗಳನ್ನ ಕಳವು ಮಾಡಲಾಗಿದೆ. ಕಂಕನಾಡಿ ನಗರ ಠಾಣಾ ವ್ಯಾಪ್ತಿಯ ಜಪ್ಪಿನ ಮೊಗರುವಿನ ಟೈಲ್ಸ್ ಅಂಗಡಿಗೂ ಕನ್ನ ಹಾಕಲಾಗಿದ್ದು ಸುಮಾರು 6000 ನಗದನ್ನ ದೋಚಲಾಗಿದೆ.

ಪೊಲೀಸರು ಸಿಸಿಟಿವಿ ಫೂಟೇಜ್ ಪರಿಶೀಲಿಸುತ್ತಿದ್ದಾರೆ. ಸಿಸಿಟಿವಿಯಲ್ಲಿ ಸೆರೆಯಾಗಿರುವ ಕಳ್ಳ ಹೊರರಾಜ್ಯದ ವಲಸಿಗನೆಂದು ತಿಳಿದು ಬಂದಿದ್ದು ಒಬ್ಬನೇ ಸರಣಿ ಕಳ್ಳತನ ನಡಸಿದ್ದಾನೆಯೇ ಅಥವಾ ಗ್ಯಾಂಗ್ ಇದೆಯೇ ಎಂದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು