ನವದೆಹಲಿ: ನಟಿ ರಶ್ಮಿಕಾ ಮಂದಣ್ಣ ಡೀಪ್ ಫೇಕ್ ವಿಡಿಯೋ ಅಪ್ಲೋಡ್ ಮಾಡಿದ ನಾಲ್ವರನ್ನು ದೆಹಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ವಶಕ್ಕೆ ಪಡಿದಿರುವ ನಾಲ್ವರ ಪೈಕಿ ಮೂವರ ಮಾಹಿತಿಯನ್ನು ಫೇಸ್ಬುಕ್ ಮೆಟಾ ನೀಡಿತ್ತು. ಈ ಮಾಹಿತಿ ಪಡೆದ ದೆಹಲಿ ಸೈಬರ್ ಪೊಲೀಸರು ಒಟ್ಟು ನಾಲ್ವರನ್ನು ವಶಕ್ಕೆ ಪಡೆದಿದ್ದಾರೆ. ಡೀಪ್ ಫೇಕ್ ವಿಡಿಯೋ ವೈರಲ್ ಆಗುತ್ತಿದ್ದಂತೆ ಅಪ್ಲೋಡ್ ಮಾಡಿದ ವ್ಯಕ್ತಿಗಳು ವಿಡಿಯೋ ಡಿಲೀಟ್ ಮಾಡಿದ್ದರು. ಹೀಗಾಗಿ ಪೊಲೀಸರಿಗೆ ಆರೋಪಿಗಳನ್ನು ಟ್ರೇಸ್ ಮಾಡುವುದು ಕಷ್ಟವಾಗಿತ್ತು.
ಸದ್ಯ ವಶದಲ್ಲಿರುವ ನಾಲ್ವರು ಡೀಪ್ ಫೇಕ್ ವಿಡಿಯೋ ಅಪ್ಲೋಡ್ ಮಾಡಿದ್ದಾರೆ. ಆದರೆ ಈ ವಿಡಿಯೋವನ್ನು ಅಭಿವೃದ್ಧಿಪಡಿಸಿದ ವ್ಯಕ್ತಿಯ ಹುಡುಕಾಟ ನಡೆಯುತ್ತಿದೆ. ಭಾರಿ ಚಾಕಚಕ್ಯತೆ ಬಳಿಸಿರುವ ಕಾರಣ ಈ ವಿಡಿಯೋ ಅಭಿವೃದ್ಧಿಪಡಿಸಿದ ಆರೋಪಿಗಳ ಪತ್ತೆ ಕಷ್ಟವಾಗುತ್ತಿದೆ. ಆದರೆ ಸೈಬರ್ ಪೊಲೀಸರು, ಮೆಟಾ ಸೇರಿದಂತೆ ಇತರ ಮಾಹಿತಿಗಳ ಆಧರಿಸಿ ಶೀಘ್ರದಲ್ಲೇ ಪ್ರಮುಖ ಆರೋಪಿ ಪತ್ತೆಹಚ್ಚುವುದಾಗಿ ದೆಹಲಿ ಪೊಲೀಸರು ಹೇಳಿದ್ದಾರೆ.