ಮುಂಬೈ: ರಶ್ಮಿಕಾ ಮಂದಣ್ಣ ಅವರ ಡೀಪ್ ಫೇಕ್ ವಿಡಿಯೋ ಬಳಿಕ ಕತ್ರಿನಾ ಕೈಫ್ ಡೀಪ್ ಫೇಕ್ ವಿಡಿಯೋ ವೈರಲ್ ಆಗಿತ್ತು. ಇದೀಗ ಮತ್ತೊಬ್ಬ ನಟಿಯ ವಿಡಿಯೋ ವೈರಲ್ ಆಗಿದೆ.
ಬೀಟೌನ್ ಖ್ಯಾತ ನಟಿ ಕಾಜೋಲ್ ಅವರನ್ನು ಜೋಡಿಸಿ ವಿಡಿಯೋವೊಂದು ವೈರಲ್ ಆಗುತ್ತಿದೆ. ಕಾಜೋಲ್ ಬಟ್ಟೆ ಬದಲಾಯಿಸುತ್ತಿರುವ ವಿಡಿಯೋವನ್ನು ಎಐ ತಂತ್ರಜ್ಞಾನ ಮೂಲಕ ಡೀಪ್ ಫೇಕ್ ಮಾಡಿ ಹರಿಬಿಡಲಾಗಿದೆ. ಈ ವಿಡಿಯೋವನ್ನು ಗೆಟ್ ರೆಡ್ ವಿತ್ ಮಿ ಟ್ರೆಂಡ್ ಅಡಿಯಲ್ಲಿ ಅಪ್ಲೋಡ್ ಮಾಡಲಾಗಿತ್ತು.