ಮೈಸೂರು: ದ್ವಿಚಕ್ರ ವಾಹನ ಹಾಗೂ ಟ್ಯಾಂಕರ್ ನಡುವೆ ಅಪಘಾತ ಸಂಭವಿಸಿ ಬೈಕ್ ಸವಾರರಾಗಿದ್ದ ಇಬ್ಬರು ಕಾರ್ಮಿಕರು ಮೃತಪಟ್ಟ ಘಟನೆ ಮಲ್ಲೂಪುರ ಗ್ರಾಮದಲ್ಲಿ ಬುಧವಾರ ನಡೆದಿದೆ. ತಗಡೂರು ಗ್ರಾಮದ ಶಿವಮಲ್ಲೇಗೌಡ ಎಂಬುವರ ಪುತ್ರ ಮಹೇಶ್ (24) ಹಾಗೂ ನಾಗರಾಜು ಎಂಬುವರ ಪುತ್ರ ಮಹೇಶ್( 23) ಮೃತಪಟ್ಟವರು.
ನಂಜನಗೂಡು ತಾಲೂಕಿನ ಅಳಗಂಚಿ ಗ್ರಾಮದ ಬಣ್ಣಾರಿ ಅಮ್ಮನ್ ಸಕ್ಕರೆ ಕಾರ್ಖಾನೆಯಲ್ಲಿ ಕೂಲಿ ಕಾರ್ಮಿಕರಾಗಿದ್ದ ಯುವಕರು ಇಂದು ಬೆಳಗ್ಗೆ ಕಾರ್ಖಾನೆ ಕೆಲಸಕ್ಕೆ ತೆರಳುತ್ತಿದ್ದ ವೇಳೆ ಈ ಅಪಘಾತ ನಡೆದಿದೆ.