News Karnataka Kannada
Thursday, May 02 2024
ಹುಬ್ಬಳ್ಳಿ-ಧಾರವಾಡ

ಇನ್‌ ಸ್ಟಾಗ್ರಾಮ್‌ ನಲ್ಲಿ ಕಾಲೇಜು ಯುವತಿಯರ ಅಶ್ಲೀಲ ಫೋಟೊ ವೈರಲ್‌: ದೂರು ನೀಡಿದ್ರೆ ಧಮ್ಕಿ

Obscene photos of college girls go viral on Instagram
Photo Credit : Pixabay

ಹುಬ್ಬಳ್ಳಿ: ಉಡುಪಿಯ ಹಾಸ್ಟೆಲ್‌ನಲ್ಲಿ ವಿದ್ಯಾರ್ಥಿನಿಯರ ವಿಡಿಯೋ ವೈರಲ್ ಪ್ರಕರಣ ಮಾಸುವ ಮುನ್ನವೇ, ಹುಬ್ಬಳ್ಳಿಯಲ್ಲಿ ಅಂತಹುದೇ ಘಟನೆ ನಡೆದಿದೆ.

ಸೈಬರ್ ವಂಚಕರು ಈಗ ಕಾಲೇಜಿನ ವಿದ್ಯಾರ್ಥಿನಿಯರನ್ನೇ ಟಾರ್ಗೆಟ್ ಮಾಡಿದ್ದಾರೆ. ಹೌದು. ಸೈಬರ್ ವಂಚಕರು ಹಾಕುತ್ತಿರುವ ಬೆದರಿಕೆ ಪೋಸ್ಟ್‌ಗಳು ಅವಳಿ ನಗರದ ಕೆಲ ಕಾಲೇಜಿನ ವಿದ್ಯಾರ್ಥಿನಿಯರು ಹಾಗೂ ಪಾಲಕರಲ್ಲಿ ಆತಂಕ ಹಾಗೂ ಭಯ ಮೂಡಿಸುತ್ತಿದೆ. ಕಳೆದ ಮೂರು ತಿಂಗಳ ಹಿಂದೆ, ಅವಳಿ ನಗರದ ಕೆಲ ಕಾಲೇಜಿನ ವಿದ್ಯಾರ್ಥಿನಿಯರ ಇನ್‌ ಸ್ಟಾಗ್ರಾಮ್‌ ಹ್ಯಾಕ್ ಮಾಡಿದ ವಂಚಕರು, ಇನ್‌ ಸ್ಟಾಗ್ರಾಮ್‌ನಲ್ಲಿರುವ ವಿದ್ಯಾರ್ಥಿನಿಯರ ಫೋಟೊಗಳನ್ನು ಎಡಿಟ್ ಮಾಡಿ ಅಶ್ಲೀಲ ಮಾಡಿ ವೈರಲ್ ಮಾಡುತ್ತಿದ್ದಾರೆ.

ಅಷ್ಟೆ ಅಲ್ಲದೆ ಮುಂದಿನ ಟಾರ್ಗೆಟ್ ಯಾರು ಎಂಬುದನ್ನೂ ಸಹ ಹಾಕಲಾಗುತ್ತಿದೆ. ಈಗಾಗಲೇ ಕೆಲ ವಿದ್ಯಾರ್ಥಿನಿಯರ ಫೋಟೊಗಳನ್ನು ಎಡಿಟ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಿದ್ದಾರೆ. ಕೆಲ ವಿದ್ಯಾರ್ಥಿನಿಗಳು ಹೆದರಿ ಮನೆಮಂದಿಗೆ ವಿಷಯ ತಿಳಿಸದೇ ಸುಮ್ಮನಿದ್ದಾರೆ. ಇನ್ನು ಕೆಲ ವಿದ್ಯಾರ್ಥಿನಿಯರು ಕಾಲೇಜಿನ ಆಡಳಿತ ಮಂಡಳಿ ಹಾಗೂ ಸೈಬರ್ ಪೊಲೀಸರಿಗೆ ದೂರು ನೀಡಿದ್ದಾರೆ. ಆದರೆ ದೂರು ಸಲ್ಲಿಸಿದ್ದು, ಕಾಲೇಜಿನ ಆಡಳಿತ ಮಂಡಳಿ ಗಮನಕ್ಕೆ ತಂದ ವಿಷಯ ಸೈಬರ್ ವಂಚಕರಿಗೆ ಗೊತ್ತಾಗುತ್ತದೆ. ಇದಕ್ಕೆ ಪ್ರತಿಯಾಗಿ ಸೈಬರ್ ವಂಚಕರ ಮತ್ತಷ್ಟು ಬೆದರಿಕೆ ಪೋಸ್ಟ್ ಗಳನ್ನು ಹಾಕುತ್ತಿದ್ದಾರೆ.

“ದಮ್ಮ ಬೆಕ್ರ ಲೇ…. ಹುಡ್ಕತಿನಿ ಅಂತ… ಅಲ್ಲ ಹುಡುಕ್ರಿ, ಪಾಲಿಟಿಕ್ಸ್ + ಪೊಲೀಸ್ + ಸೈಬರ್  ಅರ್ಥ ಮಾಡ್ಕೋರಿ, ಲೇ.. ನನ್ನ ಏನ…. ಮಾಡ್ಲಿಕು ಆಗೋದಿಲ್ಲ … ಮಕ್ಕಳ, ಹೀಗೊಂದು ಕೆಲವು ಪೋಸ್ಟ್ ವೈರಲ್ ಆಗ್ತಿವೆ. ಇನ್ನೊಂದರಲ್ಲಿ ಇನ್‌ ಸ್ಟಾಗ್ರಾಮ್ ಹ್ಯಾಕ್ ಮಾಡಿದ ವಿದ್ಯಾರ್ಥಿನಿಯರ ಫೋಟೊಗಳನ್ನು ಅಶ್ಲೀಲವಾಗಿ ಎಡಿಟ್ ಮಾಡಿ ಅಸಹ್ಯಕರವಾಗಿ ಬರಹ ಬರೆದು ವೈರಲ್ ಮಾಡಿದ್ದಾರೆ.

ಮತ್ತೊಂದರಲ್ಲಿ “ನೆಕ್ಸ್ಟ್ ಮೈ ಟಾರ್ಗೆಟ್, ಡೋಂಟ್ ಥಿಂಕ್ ಐ ಹ್ಯಾವ್ ನೋ ಫೋಟೋಸ್ ಐ ಹ್ಯಾವ್ 3 ಇಯರ್ ಬ್ಯಾಕ್ ಪೋಟೋಸ್ ಆಫ್ ಯುರ‍್ಸ್” ಎಂಬ ಬೆದರಿಕೆ ಪೋಸ್ಟ್ ಜಾಲತಾಣಗಳಲ್ಲಿ ವೈರಲ್ ಮಾಡಿ ಬೆದರಿಕೆ ಹಾಕುತ್ತಿದ್ದಾರೆ. ಇದರಿಂದ ಭಯಗೊಂಡ ವಿದ್ಯಾರ್ಥಿನಿಯರು ಮನೆಯಿಂದ ಹೊರಗೆ ಬರಲು ಹಾಗೂ ಕಾಲೇಜಿಗೆ ಹೋಗಲು ಹಿಂದೇಟು ಹಾಕುತ್ತಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು