News Karnataka Kannada
Saturday, May 04 2024
ದೆಹಲಿ

ಡಿಜಿಟಲ್‌ ಸೇವೆ ರಫ್ತಿನಲ್ಲಿ ಹೆಚ್ಚಳ : ಜಾಗತಿಕವಾಗಿ ನಾಲ್ಕನೇ ಸ್ಥಾನದಲ್ಲಿ ಭಾರತ

ಡಿಜಿಟಲ್ ಆಗಿ ಸೇವೆಗಳನ್ನು ಒದಗಿಸುವ ಬಿಸಿನೆಸ್​ನಲ್ಲಿ ಭಾರತ ವಿಶ್ವದ ಪ್ರಮುಖ ಹಬ್​ಗಳಲ್ಲಿ ಒಂದಾಗಿದೆ
Photo Credit : NewsKarnataka

ನವದೆಹಲಿ: ಡಿಜಿಟಲ್ ಆಗಿ ಸೇವೆಗಳನ್ನು ಒದಗಿಸುವ ಬಿಸಿನೆಸ್​ನಲ್ಲಿ ಭಾರತ ವಿಶ್ವದ ಪ್ರಮುಖ ಹಬ್​ಗಳಲ್ಲಿ ಒಂದಾಗಿದೆ.ಹಿಂದಿನ ವರ್ಷಕ್ಕೆ ಹೋಲಿಸಿದರೆ ಶೇ. 17ರಷ್ಟು ರಫ್ತು ಹೆಚ್ಚಳವಾಗಿದೆ. ಭಾರತ ಜಾಗತಿಕ ಸರ್ವಿಸ್ ಉದ್ಯಮದಲ್ಲಿ ಡಿಜಿಟಲ್ ಆಗಿ ತಲುಪಿಸುವ ಸರ್ವಿಸ್ ಬಿಸಿನೆಸ್ ಪಾಲು ಶೇ. 20ರಷ್ಟಿದೆ. ಒಟ್ಟಾರೆ ಸರಕು ಮತ್ತು ಸೇವೆ ರಫ್ತಿನಲ್ಲಿ ಇದರ ಪಾಲು ಶೇ. 13.8ರಷ್ಟಿದೆ. ಈ ಹಿಂದೆ 2023 ರಲ್ಲಿ ಜಾಗತಿಕವಾಗಿ ಈ ಉದ್ಯಮ 2023ರಲ್ಲಿ 4.25 ಟ್ರಿಲಿಯನ್ ಡಾಲರ್ ಇತ್ತು ಆದರೆ ಈ ಬಾರಿ 17ರಷ್ಟು ರಫ್ತು ಹೆಚ್ಚಳವಾಗಿದೆ.

ಡಬ್ಲ್ಯುಟಿಒ ಬಿಡುಗಡೆ ಮಾಡಿದ 2023ರ ಅಂಕಿ ಅಂಶವನ್ನು ನೋಡುವುದಾದರೆ, ಡಿಜಿಟಲ್ ಆಗಿ ತಲುಪಿಸುವ ಸರ್ವಿಸ್ ರಫ್ತು ಉದ್ಯಮದಲ್ಲಿ ವೃತ್ತಿಪರ ಮತ್ತು ತಾಂತ್ರಿಕ ಸೇವೆ ಶೇ. 41.2ರಷ್ಟಿದೆ. ಕಂಪ್ಯೂಟರ್ ಸರ್ವಿಸ್ ಶೇ 20.5, ಫೈನಾನ್ಷಿಯಲ್ ಸರ್ವಿಸ್ ಶೇ. 16, ಬೌದ್ಧಿಕ ಆಸ್ತಿ ಸಂಬಂಧಿತ ಸೇವೆ ಶೇ. 10.9, ಇನ್ಷೂರೆನ್ಸ್ ಮತ್ತು ಪೆನ್ಷನ್ ಸರ್ವಿಸ್ ಶೇ. 5.2, ಟೆಲಿಕಮ್ಯೂನಿಕೇಶನ್ಸ್ ಸರ್ವಿಸ್ ಶೇ. 2.6 ಹಾಗೂ ಇತರೆ ಶೇ. 3.6ರಷ್ಟಿದೆ.

ಇನ್ಫೋಸಿಸ್, ಟಿಸಿಎಸ್ ಮೊದಲಾದ ಭಾರತೀಯ ಐಟಿ ಕಂಪನಿಗಳು ಎಐ ತಂತ್ರಜ್ಞಾನವನ್ನು ಬಳಸಿ ತಮ್ಮ ಸೇವೆಗೆ ಮೊನಚು ತರುವ ಕೆಲಸ ಮಾಡುತ್ತಿವೆ. 2024ರಲ್ಲಿ ಭಾರತದ ರಫ್ತು ಮಾರುಕಟ್ಟೆಗೆ ಇದು ಉತ್ತೇಜನ ನೀಡಲಿದೆ.

ಇನ್ಫಾರ್ಮೇಶನ್ ಮತ್ತು ಕಮ್ಯೂನಿಕೇಶನ್ಸ್ ಟೆಕ್ನಾಲಜಿ (ಐಸಿಟಿ) ನೆಟ್ವರ್ಕ್ ಮೂಲಕ ತಲುಪಿಸುವ ಸೇವೆಗಳಲ್ಲಿ ಮಾರ್ಕೆಟಿಂಗ್ ಸರ್ವಿಸ್, ಫೈನಾನ್ಷಿಯಲ್ ಸರ್ವಿಸ್, ಪ್ರೊಫೆಷನಲ್ ಸರ್ವಿಸ್, ಶಿಕ್ಷಣ ತರಬೇತಿ ಸೇವೆ ಮೊದಲಾದವೂ ಒಳಗೊಂಡಿರುತ್ತವೆ. 2023ರಲ್ಲಿ ಈ ರಫ್ತಿನಲ್ಲಿ ಚೀನಾ ಮತ್ತು ಜರ್ಮನಿಯನ್ನು ಭಾರತ ಹಿಂದಿಕ್ಕಿದೆ. ಅಮೆರಿಕ ಈಗಲೂ ಕೂಡ ಡಿಜಿಟಲ್ ಸರ್ವಿಸ್​ನಲ್ಲಿ ಅಗ್ರಗಣ್ಯ ದೇಶವಾಗಿದೆ. ಬ್ರಿಟನ್ ಮತ್ತು ಐರ್ಲೆಂಡ್ ಟಾಪ್-3 ದೇಶಗಳಾಗಿವೆ. ಭಾರತದ ನಂತರದ ಐದನೇ ಸ್ಥಾನ ಜರ್ಮನಿಯದ್ದಾಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
53230
Newskarnataka

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು