News Karnataka Kannada
Tuesday, April 16 2024
Cricket
ದೆಹಲಿ

ಅರುಣಾಚಲ ಪ್ರದೇಶದ 30 ಪ್ರದೇಶಗಳಿಗೆ ನಾಮಕರಣ ಮಾಡಿದ ಚೀನಾ

ಬೀಜಿಂಗ್ ಇದೀಗ ಅರುಣಾಚಲ ಪ್ರದೇಶದ ವಿವಿಧ ಸ್ಥಳಗಳ 30 ಹೊಸ ಹೆಸರುಗಳ ನಾಲ್ಕನೇ ಪಟ್ಟಿಯನ್ನು ಚೀನಾ ಬಿಡುಗಡೆ ಮಾಡಿದೆ
Photo Credit :

ದೆಹಲಿ: ಬೀಜಿಂಗ್ ಇದೀಗ ಅರುಣಾಚಲ ಪ್ರದೇಶದ ವಿವಿಧ ಸ್ಥಳಗಳ 30 ಹೊಸ ಹೆಸರುಗಳ ನಾಲ್ಕನೇ ಪಟ್ಟಿಯನ್ನು ಚೀನಾ ಬಿಡುಗಡೆ ಮಾಡಿದೆ. ಆದರೆ ಈ ಹಿಂದೆ ಭಾರತ ಇದಕ್ಕೆ ಅನುಮತಿ ನೀಡಿರಲಿಲ್ಲ ಸ್ತುತ ರಾಜ್ಯವು ದೇಶದ ಅವಿಭಾಜ್ಯ ಅಂಗವಾಗಿದೆ ಎಂದು ಪ್ರತಿಪಾದಿಸುತ್ತದೆ. ಹೀಗೆ ಹೊಸ ಹೆಸರುಗಳನ್ನಿಡುವುದರಿಂದ ಈ ವಾಸ್ತವತೆಯನ್ನು ಬದಲಾಗುವುದಿಲ್ಲ ಎಂದು ಭಾರತ ಹೇಳಿದೆ.

ಚೀನಾದ ನಾಗರಿಕ ವ್ಯವಹಾರಗಳ ಸಚಿವಾಲಯವು ಜಂಗ್ನಾನ್‌ನಲ್ಲಿ ಭೌಗೋಳಿಕ ಹೆಸರುಗಳ ನಾಲ್ಕನೇ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಹಾಗೂ ಚೀನಾ ಇದು ದಕ್ಷಿಣ ಟಿಬೆಟ್‌ನ ಭಾಗ ಎಂದು ಹೇಳಿದ್ದು ಅರುಣಾಚಲಾ ಪ್ರದೇಶ ಕ್ಕೆ ಬೇಜಿಂಗ್‌ ಎಂದು ಚೀನಿ ಹೆಸರು ಇಡಲಾಗಿದೆ ಎಂದು ಸರ್ಕಾರಿ ಗ್ಲೋಬಲ್ ಟೈಮ್ಸ್ ಭಾನುವಾರ ವರದಿ ಮಾಡಿದೆ.

ಸಚಿವಾಲಯದ ಅಧಿಕೃತ ವೆಬ್‌ಸೈಟ್ ಈ ಪ್ರದೇಶಕ್ಕೆ 30 ಹೆಚ್ಚುವರಿ ಹೆಸರುಗಳನ್ನು ಪೋಸ್ಟ್ ಮಾಡಿದೆ. ಮೇ 1 ರಿಂದ ಜಾರಿಗೆ ಬರಲಿರುವ ಅನುಷ್ಠಾನ ಕ್ರಮಗಳು ಅನುಚ್ಛೇದ 13 ರಲ್ಲಿ “ಚೀನಾದ ಪ್ರಾದೇಶಿಕ ಹಕ್ಕುಗಳು ಮತ್ತು ಸಾರ್ವಭೌಮತ್ವದ ಹಕ್ಕುಗಳಿಗೆ ಹಾನಿಯುಂಟುಮಾಡುವ ವಿದೇಶಿ ಭಾಷೆಗಳಲ್ಲಿ ಸ್ಥಳನಾಮಗಳನ್ನು ನೇರವಾಗಿ ಉಲ್ಲೇಖಿಸಬಾರದು ಅಥವಾ ಅನುಮತಿಯಿಲ್ಲದೆ ಅನುವಾದಿಸಬಾರದು” ಎಂದು ವರದಿ ಹೇಳಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
53230
Newskarnataka

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು