News Karnataka Kannada
Thursday, April 18 2024
Cricket
ದೆಹಲಿ

ʻಇಂಡಿಯಾʼ ನಾಯಕರಿಂದ ಹೆಣ್ಣಿಗಾಗಿ ಕಿತ್ತಾಟ: ವ್ಯಂಗ್ಯ ವಿಡಿಯೋ ಹಂಚಿಕೊಂಡ ಬಿಜೆಪಿ

ಲೋಕಸಭಾ ಚುನಾವಣೆ ಹಿನ್ನಲೆ ʻಇಂಡಿಯಾʼ ಮೈತ್ರಿಕೂಟದ ಪ್ರಧಾನಿ ಯಾರಗುತ್ತೀರ ಎಂದು ಬಿಜೆಪಿ ಕೇಳಿಸದನ್ನು ಇದೀಗ ಮದುವೆಗೆ ಗಂಡು ಯಾರು ಎಂಬ ಒಂದು ವ್ಯಂಗ್ಯಮಯವ ವಿಡಿಯೋವನ್ನು ಬಿಜೆಪಿ ಹಂಚಿಕೊಂಡಿದೆ.
Photo Credit : NewsKarnataka

ನವದೆಹಲಿ: ಲೋಕಸಭಾ ಚುನಾವಣೆ ಹಿನ್ನಲೆ ʻಇಂಡಿಯಾʼ ಮೈತ್ರಿಕೂಟದ ಪ್ರಧಾನಿ ಯಾರಗುತ್ತೀರ ಎಂದು ಬಿಜೆಪಿ ಕೇಳಿಸದನ್ನು ಇದೀಗ ಮದುವೆಗೆ ಗಂಡು ಯಾರು ಎಂಬ ಒಂದು ವ್ಯಂಗ್ಯಮಯವ ವಿಡಿಯೋವನ್ನು ಬಿಜೆಪಿ ಹಂಚಿಕೊಂಡಿದೆ.

ಈ ವಿಡಿಯೋದಲ್ಲಿ ಹೆಣ್ಣು ನೋಡುವ ಶಾಸ್ತ್ರವನ್ನು ಆಯೋಜಿಸಿ ಕಾಂಗ್ರಸ್‌ ಮುಖಂಡರ ಪಾತ್ರದಲ್ಲಿ ಗಂಡಿನ ಕಡೆಯವರಂತೆ ಬರುತ್ತಾರೆ ಅದರಲ್ಲಿ ರಾಹುಲ್ ಗಾಂಧಿ, ಅಖಿಲೇಶ್ ಯಾದವ್, ಉದ್ಧವ್ ಠಾಕ್ರೆ, ಎಂ.ಕೆ ಸ್ಟಾಲಿನ್, ಮಮತಾ ಬ್ಯಾನರ್ಜಿ, ಅರವಿಂದ್ ಕೇಜ್ರಿವಾಲ್, ತೇಜಸ್ವಿ ಯಾದವ್, ಲಾಲು ಪ್ರಸಾದ್ ಯಾದವ್, ಮಲ್ಲಿಕಾರ್ಜುನ ಖರ್ಗೆ, ಸೋನಿಯಾ ಗಾಂಧಿ ಅವರನ್ನೇ ಹೋಲುವ ಪಾತ್ರಗಳನ್ನು ಸೃಷ್ಟಿಸಲಾಗಿದೆ.

ನಂತರ ಬಿಜೆಪಿಯನ್ನು ಸೂಚಿಸುವ ಹೆಣ್ಣಿನ ಕಡೆಯವರು ಇದರಲ್ಲಿ ಗಂಡು ಯಾರೆಂದು ಪ್ರಶ್ನಿಸಿದಾಗ ರಾಹುಲ್‌ ಗಾಂಧಿ ಬೇರೆಯವರು ಯಾರು ಆಗಲು ಸಾಧ್ಯ ನಾನೆ ಎಂದು ಹೇಳುತ್ತಾರೆ ಆದರೆ ಅಲ್ಲೆ ಕುಳಿತಿದ್ದ ಮತ್ತೋರ್ವ ಇಲ್ಲ ನನಗೆ ಹಕ್ಕಿದೆ ನಾನು ಗಂಡು ಎಂದು ಹೇಳುತ್ತಾರೆ ಹೀಗೆ ಅಲ್ಲಿದ್ದ ಎಲ್ಲರೂ ತಾನು ತಾನು ಎಂದು ಅವರವರಲ್ಲೇ ಕಿತ್ತಾಡಲೂ ಶುರುಮಾಡುತ್ತಾರೆ.

ಈ ಮೂಲಕ ಇನ್ನೂ ಪ್ರಧಾನಮಂತ್ರಿ ಅಭ್ಯರ್ಥಿಯನ್ನು ಹೇಗೆ ಆಯ್ಕೆ ಮಾಡಿಕೊಳ್ಳುತ್ತಾರೆ ಎಂದು ಬಿಜೆಪಿ ಈ ವಿಡಿಯೋದಲ್ಲಿ ಪ್ರಶ್ನಿಸಿದೆ. ವಿರೋಧ ಪಕ್ಷಗಳಲ್ಲಿ ಇನ್ನೂ ಪ್ರಧಾನಿ ಅಭ್ಯರ್ಥಿಯೇ ಆಯ್ಕೆಯಾಗಿಲ್ಲ. ಅಂತಿಮವೂ ಆಗಿಲ್ಲ ಎನ್ನುವುದನ್ನ ವಿಡಿಯೋದಲ್ಲಿ ಬಿಜೆಪಿ ಪಕ್ಷ ಬಿಂಬಿಸಿದೆ. ಇದೀಗ ವಿಡಿಯೋ ಸೋಶಿಯಲ್‌ ಮಿಡಿಯಾದಲ್ಲಿ ವೈರಲ್‌ ಆಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
53230
Newskarnataka

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು