ನವದೆಹಲಿ: ಪರಿಹಾರ ನಿಯಮಗಳನ್ನು ಪಾಲಿಸದ ಕಾರಣ ನಾಗರಿಕ ವಿಮಾನಯಾನ ನಿರ್ದೇಶನಾಲಯಇಂದು ಎರಡನೇ ಬಾರಿಗೆ ಏರ್ ಇಂಡಿಯಾಕ್ಕೆ 10 ಲಕ್ಷ ರೂ.ಗಳ ದಂಡ ವಿಧಿಸಿದೆ.
ಈಗಾಗಲೇ ಏರ್ ಇಂಡಿಯಾಗೆ ಒಮ್ಮೆ ಡಿಜಿಸಿಎ ದಂಡವನ್ನು ವಿಧಿಸಿತ್ತು. ಈಗ ಮತ್ತೊಮ್ಮೆ 2ನೇ ಬಾರಿಗೆ ಇಂದು 10 ಲಕ್ಷ ದಂಡವನ್ನು ವಿಧಿಸಿದೆ. ಈ ಮೂಲಕ ಏರ್ ಇಂಡಿಯಾಗೆ ಡಿಜಿಸಿಎ ಬಿಗ್ ಶಾಕ್ ನೀಡಿದೆ.
ಎಎನ್ಐ ಎಕ್ಸ್ ನಲ್ಲಿ ನೀಡಿರುವ ಮಾಹಿತಿಯಂತೆ ಡಿಜಿಸಿಎ ನಿಯಮಗಳನ್ನು ಪಾಲಿಸದ ಕಾರಣ ಡಿಜಿಸಿಎ ಏರ್ ಇಂಡಿಯಾಗೆ 10 ಲಕ್ಷ ರೂ.ಗಳ ಆರ್ಥಿಕ ದಂಡ ವಿಧಿಸಿದೆ. ಸಂಬಂಧಿತ ನಿಯಮಗಳ ನಿಬಂಧನೆಗಳನ್ನು ಅನುಸರಿಸದ ಕಾರಣ ಪ್ರತಿಕ್ರಿಯೆ ಕೋರಿ 2023 ರ ನವೆಂಬರ್ 3 ರಂದು ಏರ್ ಇಂಡಿಯಾಕ್ಕೆ ಶೋಕಾಸ್ ನೋಟಿಸ್ ನೀಡಲಾಯಿತು ಎಂದಿದೆ.