ವಿಜಯವಾಡ: ಶಾಲಾ ಮಕ್ಕಳನ್ನು ಕರೆದೊಯ್ಯುವ ವಾಹನಗಳು ಎಷ್ಟು ಎಚ್ಚರಿಕೆಯಿಂದ ಸಾಗಿದರೂ ಸಾಲದು ಎಂಬ ಸ್ಥಿತಿಯಿದೆ. ಎಳೆಯ ಪುಟಾಣಿಗಳು ಈ ಘನ ವಾಹನಗಳ ಅಬ್ಬರದಿಂದ ಜೀವ ಕೈಯಲ್ಲಿ ಹಿಡಿದು ಸಾಗುವ ಸ್ಥಿತಿಯಿದೆ.
ಅದೇ ರೀತಿ ವಿಶಾಖಪಟ್ಟಣಂ ನಗರದ ಹೃದಯ ಭಾಗದಲ್ಲಿರುವ ಸಂಗಮ್-ಸರತ್ ವೃತ್ತದಲ್ಲಿ ಇಂದು ಬುಧವಾರ ಬೆಳಗ್ಗೆ ಶಾಲಾ ಆಟೋಗೆ ವೇಗವಾಗಿ ಬಂದ ಟ್ರಕ್ ಡಿಕ್ಕಿ ಹೊಡೆದ ಪರಿಣಾಮ ಆಟೋದಲ್ಲಿದ್ದ ಎಂಟು ಮಕ್ಕಳು ವಾಹನದಿಂದ ಹೊರಗೆ ಬಿದ್ದು ಗಾಯಗೊಂಡಿದ್ದಾರೆ. ಇವರಲ್ಲಿ ಇಬ್ಬರ ಸ್ಥಿತಿ ಗಂಭೀರವಾಗಿದೆ ಎನ್ನಲಾಗಿದೆ.
ಮಕ್ಕಳು ರಾಮ್ ನಗರದಲ್ಲಿರುವ ತಮ್ಮ ಶಾಲೆಗೆ ಹೋಗುತ್ತಿದ್ದಾಗ ಅವಘಡ ಸಂಭವಿಸಿದೆ. ಆಟೋ ಚಾಲಕನೂ ಗಾಯಗೊಂಡಿದ್ದಾನೆ. ರೈಲು ನಿಲ್ದಾಣದಿಂದ ಸಿರಿಪುರಂ ಜಂಕ್ಷನ್ ಕಡೆಗೆ ಹೋಗುತ್ತಿದ್ದ ಟ್ರಕ್ ಆಟೋಗೆ ಡಿಕ್ಕಿ ಹೊಡೆದಿದೆ. ಆಟೋ ಡೈಮಂಡ್ ಪಾರ್ಕ್ ರಸ್ತೆಯಿಂದ ಅಂಬೇಡ್ಕರ್ ಪ್ರತಿಮೆ ಜಂಕ್ಷನ್ ಕಡೆಗೆ ಹೋಗುತ್ತಿತ್ತು.
According to the #HeartWrenching #CCTV visual:
The #speeding #AutoRickshaw carrying 7 school children hit the lorry and overturned in #Visakhapatnam, causing 7 #Students injured and 2 of them serious
It’s not clear who jumps the signal.#RoadAccident #RoadSafety #AndhraPradesh https://t.co/YRwzvJEicm pic.twitter.com/LWfvNfMTpN— Surya Reddy (@jsuryareddy) November 22, 2023