ಬಿಹಾರ: ಬಿಹಾರದ ಕಾಂಗ್ರೆಸ್ ಶಾಸಕಿ ನೀತು ಸಿಂಗ್ ಅವರ ಮನೆಯಲ್ಲಿ 24 ವರ್ಷದ ಯುವಕನ ಶವ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಪಿಯೂಷ್ ಸಿಂಗ್, ನೀತು ಸಿಂಗ್ ಅವರ ದೂರದ ಸಂಬಂಧಿಯಾಗಿದ್ದು, ಪೊಲೀಸರು ಶವವನ್ನು ಪತ್ತೆ ಮಾಡಿದಾಗ ಶಾಸಕಿ ಅವರ ಮನೆಯಲ್ಲಿ ಇರಲಿಲ್ಲ ಎಂದು ನಾವಡಾ ಪೊಲೀಸ್ ವರಿಷ್ಠಾಧಿಕಾರಿ ಅಂಬರೀಶ್ ರಾಹುಲ್ ತಿಳಿಸಿದ್ದಾರೆ.
ನೀತು ಸಿಂಗ್ ಅವರ ಸೋದರಳಿಯ ಗೋಲು ಸಿಂಗ್ ಅವರಿಗೆ ಸೇರಿದ ಕೋಣೆಯಲ್ಲಿ ಪಿಯೂಷ್ ಸಿಂಗ್ ಅವರ ಶವ ಬಿದ್ದಿತ್ತು. ಪೊಲೀಸರು ಪ್ರಕರಣದ ತನಿಖೆಗಾಗಿ ವಿಧಿ ವಿಜ್ಞಾನ ಪ್ರಯೋಗಾಲಯ (ಎಫ್ಎಸ್ಎಲ್) ತಜ್ಞರು ಮತ್ತು ಶ್ವಾನ ದಳವನ್ನು ಸಹಾಯ ಪಡೆದಿದ್ದಾರೆ. ಇನ್ನು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ನೀತು ಸಿಂಗ್ ಅವರ ಮನೆಯಲ್ಲಿ ಪೊಲೀಸರು ಶೋಧ ನಡೆಸುತ್ತಿದ್ದಾರೆ ಎಂದು ಎಸ್ಪಿ ತಿಳಿಸಿದ್ದಾರೆ.