News Karnataka Kannada
Saturday, May 18 2024
ಕಲಬುರಗಿ

ಜಾತಿ ನಿಂದನೆ ಕೇಸ್ ಹೆದರಿದ ಯುವಕ ಆತ್ಮಹತ್ಯೆಗೆ ಶರಣು

ಜಾತಿ ನಿಂದನೆ ಕೇಸ್‌ ದಾಖಲಿಸಿದ್ದಕ್ಕೆ ಹೆದರಿ ಯುವಕನೋರ್ವ ಆತ್ಮಹತ್ಯೆ ಮಾಡಿಕೊಂಡ ಘಟನೆ ಕಲಬುರಗಿ ಜಿಲ್ಲೆಯ ಕಮಲಾಪುರ ತಾಲೂಕಿನ ಲಾಡಮುಗಳಿ ಗ್ರಾಮದಲ್ಲಿ ನಡೆದಿದೆ.
Photo Credit : NewsKarnataka

ಕಲಬುರಗಿ: ಜಾತಿ ನಿಂದನೆ ಕೇಸ್‌ ದಾಖಲಿಸಿದ್ದಕ್ಕೆ ಹೆದರಿ ಯುವಕನೋರ್ವ ಆತ್ಮಹತ್ಯೆ ಮಾಡಿಕೊಂಡ ಘಟನೆ ಕಲಬುರಗಿ ಜಿಲ್ಲೆಯ ಕಮಲಾಪುರ ತಾಲೂಕಿನ ಲಾಡಮುಗಳಿ ಗ್ರಾಮದಲ್ಲಿ ನಡೆದಿದೆ.

ನಿಖಿಲ್ ಪೂಜಾರಿ(23) ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಯುವಕ. ಲಾಡಮುಗಳಿ ಗ್ರಾಮದ ಹೊರ ವಲಯದ ಜಮೀನಿನಲ್ಲಿ ನೇಣಿಗೆ ಶರಣಾಗಿರುವ ಯುವಕ.

ಕಳೆದ ನಾಲ್ಕು ದಿನಗಳ ಹಿಂದೆ ಲಾಡಮುಗಳಿ ಗ್ರಾಮದಲ್ಲಿ ಜಾತ್ರೆ ನಡೆದಿತ್ತು. ಜಾತ್ರೆ ವೇಳೆ ಎರಡು ಸಮುದಾಯಗಳ ಯುವಕರ ನಡುವೆ ಕ್ಷುಲ್ಲಕ ಕಾರಣಕ್ಕೆ ಗಲಾಟೆಯಾಗಿತ್ತು.

ಗಲಾಟೆ ಬಳಿಕ ಊರವರ ಸಮ್ಮುಖದಲ್ಲಿ ರಾಜೀ ಸಂಧಾನ ಕೂಡ ಮಾಡಲಾಗಿತ್ತು. ಆದರೆ ರಾಜೀ ಸಂಧಾನ ಬಳಿಕವೂ ನಿಖಿಲ್ ಪೂಜಾರಿ ಸೇರಿ ಹಲವರ ವಿರುದ್ಧ ನರೋಣಾ ಪೊಲೀಸ್ ಠಾಣೆಗೆ ದೂರು ನೀಡಿದ್ದ ಇನ್ನೊಂದು ಗುಂಪು.

ನಿಖಿಲ್ ಸೇರಿ ಹಲವರ ವಿರುದ್ದ ಜಾತಿ ನಿಂದನೆ ಕೇಸ್ ದಾಖಲಾಗಿತ್ತು. ಜಾತಿ ನಿಂದನೆ ಕೇಸ್ ದಾಖಲಾಗಿದ್ದಕ್ಕೆ ಹೆದರಿಕೊಂಡಿದ್ದ ಯುವಕ ನಿಖಿಲ್ ಪೂಜಾರಿ ಗ್ರಾಮದ ಹೊರವಲಯದಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾನೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
53230
Newskarnataka

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು