News Karnataka Kannada
Monday, April 29 2024
ಬಿಹಾರ

ಪಾಟ್ನಾ: ಬಿಹಾರದಲ್ಲಿ ಭಾರೀ ಮಳೆ, ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ನದಿಗಳು

Bhadra river water to canal in first week of August
Photo Credit : Wikimedia

ಪಾಟ್ನಾ: ಕಳೆದ ಒಂದು ವಾರದಿಂದ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಬಿಹಾರದಲ್ಲಿ ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸಿದೆ. ಕೋಸಿ, ಕಮಲಾ ಬಾಲನ್, ಗಂಡಕ್, ಬಾಗ್ಮತಿ ಮತ್ತು ಮಹಾನಂದಾ ನದಿಗಳು ಅಪಾಯದ ಮಟ್ಟವನ್ನು ದಾಟಿದ.

ಕೇಂದ್ರ ಜಲ ಆಯೋಗದ (ಸಿಡಬ್ಲ್ಯೂಸಿ) ಪ್ರಕಾರ, ಬಾಗ್ಮತಿ ಬೆನಿಬಾದ್ ನಲ್ಲಿ 65 ಸೆಂ.ಮೀ, ಕಮಲಾ ಬಾಲನ್ ನದಿಯಲ್ಲಿ 30 ಸೆಂ.ಮೀ ಮತ್ತು ಮಧುಬನಿ ಜಿಲ್ಲೆಯ ಝಂಜರ್ಪುರದಲ್ಲಿ 51 ಸೆಂ.ಮೀ. ಎತ್ತರದಲ್ಲಿ ಹರಿಯುತ್ತಿದೆ.

ಸುಪೌಲ್ ಜಿಲ್ಲೆಯ ಬಸುವಾದಲ್ಲಿ ಕೋಸಿ ನದಿಯು ಅಪಾಯದ ಮಟ್ಟಕ್ಕಿಂತ 134 ಸೆಂ.ಮೀ ಮತ್ತು ಖಗಾರಿಯಾ ಜಿಲ್ಲೆಯ ಬಾಲ್ಟಾರಾದಲ್ಲಿ 37 ಸೆಂ.ಮೀ ಎತ್ತರದಲ್ಲಿ ಹರಿಯುತ್ತಿದೆ.  ಪೂರ್ಣಿಯಾ ಜಿಲ್ಲೆಯ ಧೇಗ್ರಾ ಘಾಟ್ನಲ್ಲಿ ಮಹಾನಂದಾ ನದಿ ಉಕ್ಕಿ ಹರಿಯುತ್ತಿದೆ.

ಅರಾರಿಯಾದಲ್ಲಿ ಪರ್ಮಾನ್ ನದಿಯು ಅಪಾಯದ ಮಟ್ಟಕ್ಕಿಂತ ೪೩ ಸೆಂ.ಮೀ. ಎತ್ತರದಲ್ಲಿ ಹರಿಯುತ್ತಿದೆ. ಬಿಹಾರವು ತಗ್ಗು ಪ್ರದೇಶವಾಗಿರುವುದರಿಂದ, ನೇಪಾಳದಲ್ಲಿ ಭಾರಿ ಮಳೆಯಿಂದಾಗಿ ಈ ನದಿಗಳಲ್ಲಿಯೂ ನೀರು ಸಂಗ್ರಹವಾಗುತ್ತದೆ.

ಹವಾಮಾನ ಇಲಾಖೆಯು ಕಳೆದ ೨೪ ಗಂಟೆಗಳಲ್ಲಿ ಉತ್ತರ ಬಿಹಾರದ ಹೆಚ್ಚಿನ ಜಿಲ್ಲೆಗಳಲ್ಲಿ ಸರಾಸರಿ ೫೦ ಸೆಂ.ಮೀ ಮಳೆಯನ್ನು ದಾಖಲಿಸಿದೆ. ವಾಲ್ಮೀಕಿ ನಗರದಲ್ಲಿ 68 ಸೆಂ.ಮೀ. ಚನ್ಪಾಟಿಯಾ 90 ಸೆಂ.ಮೀ., ಸಮಸ್ತಿಪುರದಲ್ಲಿ 84 ಸೆಂ.ಮೀ., ರೊಸೆರಾದಲ್ಲಿ 70 ಸೆಂ.ಮೀ., ಡುಮಾರಿಯಾಘಾಟ್ ನಲ್ಲಿ 91 ಸೆಂ.ಮೀ., ಖಗರಿಯಾದಲ್ಲಿ 54 ಸೆಂ.ಮೀ., ಬೆನಿಬಾದ್ ನಲ್ಲಿ 68 ಸೆಂ.ಮೀ. ದಾಖಲಾಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
30409

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು