ಪಾಟ್ನಾ: ಸಿಎಂ ನಿತೀಶ್ ಕುಮಾರ್ ನೇತೃತ್ವದ ಸರ್ಕಾರ ಜಾತಿಗಣತಿ ಬಿಡುಗಡೆ ಮಾಡಿದ್ದು, ಭಾರೀ ವಿವಾದಕ್ಕೆ ತಿರುಗಿದೆ. ಬಿಹಾರದ ಮುಖ್ಯ ಕಾರ್ಯದರ್ಶಿ ಬಿಡುಗಡೆ ಮಾಡಿರುವ ಜಾತಿ ಆಧಾರಿತ ಸಮೀಕ್ಷೆಯ ಫಲಿತಾಂಶದಲ್ಲಿ ರಾಜ್ಯದ ಜನಸಂಖ್ಯೆಯ ಶೇ.63 ರಷ್ಟು ಇತರೆ ಹಿಂದುಳಿದ (OBC) ಜಾತಿಗಳನ್ನು ಹೊಂದಿದೆ ಎಂದು ಉಲ್ಲೇಖಿಸಲಾಗಿದೆ.
ಬಿಹಾರದ ಒಟ್ಟು 13,07,25,310 ಜನಸಂಖ್ಯೆ
ಹಿಂದುಳಿದ ಮತ್ತು ಅತಿ ಹಿಂದುಳಿದ ಸಮಯದಾಯ ಶೇಕಡಾ 63
ಹಿಂದುಳಿದ ವರ್ಗ ಶೇಕಡಾ 27.12, ಅತಿ ಹಿಂದುಳಿದ ಶೇ.36.01
ಪ. ಜಾತಿ ಶೇ.19.65, ಪರಿಶಿಷ್ಟ ಪಂಗಡ ಶೇಕಡಾ 1.68
ಮೀಸಲಾತಿಯಿಂದ ಹೊರಗಿರುವ ಜನಸಂಖ್ಯೆ ಶೇಕಡಾ 15.52
ಭೂಮಿಹಾರ್ಗಳು ಶೇ.2.86 ಜನಸಂಖ್ಯೆ ಇದ್ದಾರೆ.
ಬ್ರಾಹ್ಮಣರು ಶೇಕಡಾ 3.66 ರಷ್ಟು, ಕುರ್ಮಿಸ್ 2.87, ಮುಸಾಹರ್ಸ್ ಶೇ.3 ರಷ್ಟಿದ್ದಾರೆ.
ಶೇ.81.99 ರಷ್ಟು ಹಿಂದೂ ಧರ್ಮದವರು
ಭೂಮಿಹಾರ ಸಮುದಾಯ ಶೇಕಡಾ 2.86 ರಷ್ಟು ಜನಸಂಖ್ಯೆ
ಕುರ್ಮಿ ಸಮುದಾಯ ಶೇ.2.77 ರಷ್ಟು ವಾಸವಿದ್ದಾರೆ
ಶೇ.17.7 ರಷ್ಟು ಮುಸ್ಲಿಂ ಸಮುದಾಯದ ಜನಸಂಖ್ಯೆ ಇದೆ
ಯಾದವ್ ಸಮುದಾಯದ ಜನಸಂಖ್ಯೆ ಶೇ.14 ರಷ್ಟಿದೆ
ರಜಪೂತ್ ಶೇಕಡಾ 3.45 ರಷ್ಟಿದ್ದಾರೆ.
ಇದರಲ್ಲಿ ಒಟ್ಟು ಪುರುಷರ ಸಂಖ್ಯೆ 6 ಕೋಟಿ 41 ಲಕ್ಷದ 31 ಸಾವಿರದ 990. ಮಹಿಳೆಯರ ಸಂಖ್ಯೆ 6 ಕೋಟಿ 11 ಲಕ್ಷ 38 ಸಾವಿರದ 460.
ಸಿಎಂ ನಿತೀಶ್ ಕುಮಾರ್ ನೇತೃತ್ವದ ಸರ್ಕಾರ ಜಾತಿಗಣತಿಯನ್ನು ಇದೇ ವರ್ಷ ಜನವರಿಯಿಂದ ಆರಂಭಿಸಿತ್ತು. ರಾಜ್ಯದ್ಯಾಂತ ಗಣತಿ ಮಾಡಲು ಸರ್ಕಾರ ಒಟ್ಟು 500 ಕೋಟಿ ರೂಪಾಯಿಗಳನ್ನು ಖರ್ಚು ಮಾಡಲಾಗಿದೆ.